ಅ೦ತರಾಷ್ಟ್ರೀಯ

ಸರ್ಕಾರ ನಡೆಸೋಕೆ ದುಡ್ಡಿಲ್ಲ ಅಂದ್ರು ಪಾಕ್ ಪಿಎಂ, ಆದರೆ ಆಟೋ ಡೈವರ್ 300 ಕೋಟಿ, ಬೀದಿ ವ್ಯಾಪಾರಿ 200 ಕೋಟಿ ವಹಿವಾಟು

ಕರಾಚಿ: ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರು ಇತ್ತೀಚೆಗಷ್ಟೇ ಸರ್ಕಾರ ನಡೆಸಲು ನಮ್ಮ ಬಳಿ ದುಡ್ಡಿಲ್ಲ ಎಂದು ಸಾರ್ವಜನಿಕವಾಗಿ ಹೇಳಿ ನಗೆಪಾಟಲಿಗೀಡಾಗಿದ್ದರು. ಆದರೆ ಪಾಕಿಸ್ತಾನದ ಆಟೋ ಡ್ರೈವರ್ ಖಾತೆಯಲ್ಲಿ 300 ಕೋಟಿ ಹಾಗೂ ಬೀದಿ ವ್ಯಾಪಾರಿ 200 ಕೋಟಿ ರುಪಾಯಿ ವಹಿವಾಟು ನಡೆದಿರುವ ಪ್ರಕರಣವನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಪಾಕಿಸ್ತಾನದ ಬೀದಿ ವ್ಯಾಪಾರಿಯೊಬ್ಬರ ಖಾತೆಯಲ್ಲಿ 200 ಕೋಟಿ ರುಪಾಯಿ ಪತ್ತೆಯಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಕರಾಚಿಯಲ್ಲಿ ಆಟೋ ಡ್ರೈವರ್ ಆಗಿರುವ ಮೊಹಮ್ಮದ್ ರಶೀದ್ ಎಂಬಾತ ತನ್ನ ಖಾತೆಯಿಂದ 300 ಕೋಟಿ ರುಪಾಯಿ ವಹಿವಾಟು ನಡೆಸಿದ್ದು ಈ ಸಂಬಂಧ ಪಾಕ್ ನ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ರಶೀದ್ ನನ್ನ ಕರೆಸಿ ವಿಚಾರಣೆ ನಡೆಸುತ್ತಿದೆ. ವಿಚಾರಣೆ ಬಳಿಕ ಮಾತನಾಡಿದ ರಶೀದ್ ಮೊದಲಿಗೆ ಎಫ್ಐಎ ಅಧಿಕಾರಿಗಳು ನನಗೆ ಕರೆ ಮಾಡಿ ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಏನು ನಡೆಯುತ್ತಿದೆ ಎಂದು ನನಗೆ ಗೊತ್ತಿರಲಿಲ್ಲ. ಇದೀಗ ಮತ್ತೆ ನನ್ನನ್ನು ಕರೆಸಿಕೊಂಡು ವಿಚಾರಣೆ ನಡೆಸಿದರು. ಆಗಲೇ ನನಗೆ ಗೊತ್ತಾಗಿದ್ದು ನನ್ನ ಖಾತೆಯಲ್ಲಿ 300 ಕೋಟಿ ರುಪಾಯಿ ವಹಿವಾಟು ಆಗಿದೆ ಅಂತ ಎಂದು ಹೇಳಿದ್ದಾರೆ. ಕಳೆದ ಸೆಪ್ಟೆಂಬರ್ ನಲ್ಲಿ ಕರಾಚಿಯ ಒರಾಂಗಿ ಪ್ರದೇಶದ ಬೀದಿ ವ್ಯಾಪಾರಿ ಆಗಿರುವ ಅದ್ಬುಲ್ ಖಾದಿರ್ ಹೆಸರಿನಲ್ಲಿದ್ದ ಖಾತೆಯಲ್ಲಿ 200 ಕೋಟಿ ಹಣ ಪತ್ತೆಯಾಗಿತ್ತು. ಈ ಕುರಿತು ಪಾಕಿಸ್ತಾನ ತೆರಿಗೆ ಇಲಾಖೆ ಬಂಧಿಸಿ, ವಿಚಾರಣೆ ನಡೆಸಿದಾಗ ಈ ಹಣಕ್ಕೂ ಅಬ್ದುಲ್ ಖಾದಿರ್ ಗೂ ಯಾವುದೇ ಸಂಬಂಧವಿಲ್ಲ ಎಂಬುದು ತಿಳಿದುಬಂದಿದೆ. ಈಗ ಮತ್ತೊಮ್ಮೆ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ.

About the author

ಕನ್ನಡ ಟುಡೆ

Leave a Comment