ರಾಷ್ಟ್ರ ಸುದ್ದಿ

ಸರ್ಜಿಕಲ್‌ ಸ್ಟ್ರೈಕ್‌ಗೆ ಎರಡು ವರ್ಷ: ಕೋನಾರ್ಕ್‌ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಗೌರವ

ನವದೆಹಲಿ: ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ ಸೇನೆಯ ಎರಡನೇ ವರ್ಷಾಚರಣೆ ಸಂಭ್ರಮದ ಕಮಾಂಡರ್‌ಗಳ ಜಂಟಿ ಸಮಾವೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪರಾಕ್ರಮ ಪರ್ವ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು. ಜೋಧ್‌ಪುರ ಸೇನಾ ನೆಲೆಯಲ್ಲಿ ಕೋನಾರ್ಕ್‌ ಕಾರ್ಪ್ಸ್‌ ಪರಾಕ್ರಮ ಪರ್ವ ವಸ್ತು ಪ್ರದರ್ಶನವನ್ನು ಆಯೋಜಿಸಿತ್ತು. ಕೋನಾರ್ಕ್‌ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಮೋದಿ ಗೌರವ ಸಲ್ಲಿಸಿದರು. ರಾಜಸ್ಥಾನ ಸಿಎಂ ವಸುಂಧರಾ ರಾಜೇ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​, ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ ಪ್ರಧಾನಿಗೆ ಸಾಥ್‌ ನೀಡಿದ್ದಾರೆ.

ಭಾರತೀಯ ಸೇನೆಯ ಶೌರ್ಯ ಮತ್ತು ಸಾಧನೆಗಳನ್ನು ಎತ್ತಿ ಹಿಡಿಯುವ ಸಲುವಾಗಿ ಸರ್ಜಿಕಲ್​ ಸ್ಟ್ರೈಕ್​​ನ ಸ್ಮರಣಾರ್ಥ ಮೂರು ದಿನಗಳವರೆಗೆ ಪರಾಕ್ರಮ ಪರ್ವ​​ ಸಂಭ್ರಮಾಚರಣೆಗೆ ಕರೆ ನೀಡಲಾಗಿದ್ದು, ಇಂಡಿಯಾ ಗೇಟ್​​ ಬಳಿ 3 ದಿನಗಳವರೆಗೆ ಪರಾಕ್ರಮ ಪರ್ವ ನಡೆಯಲಿದೆ. ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯ ಪರಿಸ್ಥಿತಿ, ಚೀನಾ ಜತೆಗಿನ ಗಡಿ ನಿಯಂತ್ರಣ ಸ್ಥಿತಿ ಮತ್ತು ಕಾಶ್ಮೀರ ಕಣಿವೆಯಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಭಾರತದ ಮೂರು ಸೇನಾಪಡೆಗಳ ಮುಖ್ಯಸ್ಥರು ವಿವರಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಸೆಪ್ಟೆಂಬರ್‌ 28, 2018ಕ್ಕೆ ಸರ್ಜಿಕಲ್‌ ಸ್ಟ್ರೈಕ್‌ ನಡೆದು ಎರಡು ವರ್ಷ ತುಂಬಿದ್ದು, 2016ರಲ್ಲಿ ನಡೆದ ಸರ್ಜಿಕಲ್‌ ಸ್ಟ್ರೈಕ್‌ನ ಎರಡನೇ ವಿಡಿಯೋವನ್ನು ಕೇಂದ್ರ ಸರ್ಕಾರ ಸೆ.26ರಂದು ಬಿಡುಗಡೆ ಮಾಡಿದೆ.

About the author

ಕನ್ನಡ ಟುಡೆ

Leave a Comment