ರಾಜ್ಯ ಸುದ್ದಿ

ಸರ್ಜಿಕಲ್ ಸ್ಟ್ರೈಕ್ ಕುರಿತು ಸಾಕ್ಷಿ ಕೇಳಲ್ಲವೆಂದು ವಿಶ್ವಾಸ ಇಡಬಹುದೇ: ಸುರೇಶ್ ಕುಮಾರ್

ಬೆಂಗಳೂರು: ಇಂದು ನಸುಕಿನ ಜಾವ ಪಾಕ್ ಭಯೋತ್ಪಾದಕರ ನೆಲೆ ಮೇಲೆ ಭಾರತೀಯ ವಾಯುಪಡೆ ನಡೆಸಿರುವ ಸರ್ಜಿಕಲ್ ಸ್ಟ್ರೈಕ್‌ಗೆ ಸಂಬಂಧಿಸಿದಂತೆ ಸಾಕ್ಷಿ, ಪುರಾವೆ ಕೇಳುವುದಿಲ್ಲವೆಂದು ವಿಶ್ವಾಸ ಇಡಬಹುದೇ ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್ ಕುಮಾರ್ ನಯವಾಗಿ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. 2016ರ ಸೆಪ್ಟೆಂಬರ್‌ 29ರಂದು ಪಾಕ್ ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತೀಯ ಸೇನಾ ಪಡೆಗಳು ಮೊದಲ ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರು ಸಾಕ್ಷಿ ಕೇಳಿದ್ದರು.

ಭಾರತೀಯ ವಾಯುಪಡೆ ನಡೆಸಿದ ಸರ್ಜಿಕಲ್‌ ಸ್ಟೈಕ್‌ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಟ್ವೀಟ್ ಉಲ್ಲೇಖಿಸಿ ಟ್ವೀಟ್ ಮಾಡಿರುವ  ಸುರೇಶ್ ಕುಮಾರ್, ಪುಲ್ವಾಮಾ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ನಡೆಸಿರುವ ಭರ್ಜರಿ ಸರ್ಜಿಕಲ್ ಸ್ಟ್ರೈಕ್ ಕುರಿತು ಸಾಕ್ಷಿ ಕೇಳುವುದಿಲ್ಲ ಎಂದು ವಿಶ್ವಾಸ ಇಡಬಹುದೇ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ರಾಹುಲ್ ಗಾಂಧಿ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಸಾಕ್ಷಿ ಕೇಳುತ್ತಿಲ್ಲ ಎಂದು ಕಾಲೆಳೆದಿದ್ದಾರೆ.

ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಪಡೆ ಗಡಿ ರೇಖೆ ದಾಳಿ ಉಗ್ರ ಶಿಬಿರಗಳನ್ನು ಧ್ವಂಸ ಮಾಡಿದೆ. ಸುಮಾರು ಸಾವಿರ ಕೆ.ಜಿ ಬಾಂಬ್ ದಾಳಿಯ ಮೂಲಕ ಉಗ್ರರ ಹುಟ್ಟಡಗಿಸಲಾಗಿದೆ. ಭಾರತೀಯ ವಾಯುಪಡೆ ನಡೆಸಿರುವ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸುಮಾರು 300ಕ್ಕೂ ಅಧಿಕ ಉಗ್ರರು ಮಟಾಶ್ ಆಗಿರುವ ಸಾಧ್ಯತೆ ಇದೆ.

About the author

ಕನ್ನಡ ಟುಡೆ

Leave a Comment