ರಾಷ್ಟ್ರ ಸುದ್ದಿ

ಸರ್ದಾರ್ ಪಟೇಲ್ ಮೊದಲ ಪ್ರಧಾನಿಯಾಗಿದ್ದರೆ ಭಾರತದ ಪಥವೇ ಬದಲಾಗಿರುತ್ತಿತ್ತು: ಪ್ರಧಾನಿ ಮೋದಿ

ಹೊಸದಿಲ್ಲಿ: ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಸಮಾವೇಶ ಉದ್ದೇಶಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುತ್ತಿದ್ದಾರೆ. ನಾನು ಗುಜರಾತ್ ಮುಖ್ಯಮಂತ್ರಿಯಾದ ಬಳಿಕ 12 ವರ್ಷಗಳ ಕಾಲ ನನಗೆ ಕಿರುಕುಳ ನೀಡಲು ತನ್ನ ಸರ್ವಶಕ್ತಿಯನ್ನೂ ಕಾಂಗ್ರೆಸ್‌ ಬಳಸಿಕೊಂಡಿತ್ತು: ಪ್ರಧಾನಿ ಮೋದಿ

ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಯುಪಿಎ ಸರಕಾರದಿಂದ ಸತತ 12 ವರ್ಷಗಳ ಕಾಲ ಕಿರುಕುಳ ಅನುಭವಿಸಿದೆ. ಆದರೂ ರಾಜ್ಯದಲ್ಲಿ ಸಿಬಿಐ ಪ್ರವೇಶವನ್ನು ನಿಷೇಧಿಸಿಲ್ಲ.ಪ್ರಧಾನಿ ನರೇಂದ್ರ ಮೋದಿ.

ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನನ್ನನ್ನು ಒಂದು ತನಿಖಾ ಸಂಸ್ಥೆ ಕರೆಸಿಕೊಂಡು 9 ಗಂಟೆಗಳ ಕಾಲ ವಿಚಾರಣೆ ನಡೆಸಿತು. ಆದರೆ ಕಾಂಗ್ರೆಸ್‌ನ ಪ್ರಥಮ ಕುಟುಂಬ ಎಲ್ಲ ಕಾನೂನುಗಳಿಂತ ಮೇಲಿರುವಂತೆ ಭಾವಿಸಿದೆ. ಸಮನ್ಸ್‌ ನೀಡಿದ್ದರೂ ಕೋರ್ಟಿಗೆ ಹಾಜರಾಗುತ್ತಿಲ್ಲ”-ಪ್ರಧಾನಿ ಮೋದಿ

ಹಿಂದಿನ ಕಾಂಗ್ರೆಸ್‌ ಸರಕಾರಕ್ಕೆ ಇದ್ದುದು ಒಂದೇ ಅಜೆಂಡಾ. ಮೋದಿಯನ್ನು ಹೇಗಾದರೂ ಮಾಡಿ ಮುಗಿಸಿಬಿಡಬೇಕು ಎಂಬುದೇ ಆ ಅಜೆಂಡಾ ಆಗಿತ್ತು: ರಾಷ್ಟ್ರೀಯ ಸಮಾವೇಶದಲ್ಲಿ ಪ್ರಧಾನಿ ಮೋದಿ. ಕೆಲವು ರಾಜ್ಯಗಳು ತಮ್ಮ ಭ್ರಷ್ಟಾಚಾರ ಬಯಲಾಗಬಹುದೆಂಬ ಭೀತಿಯಿಂದ ಸಿಬಿಐ ಪ್ರವೇಶಕ್ಕೆ ತಡೆಯೊಡ್ಡಿವೆ: ಪ್ರಧಾನಿ ಮೋದಿ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್‌ ಅಡ್ಡಗಾಲು ಹಾಕುತ್ತಿದ್ದು, ಅದಕ್ಕೆಂದೇ ವಕೀಲರನ್ನು ನೇಮಿಸುತ್ತಿದೆ: ಪ್ರಧಾನಿ ಮೋದಿ. ನೀತಿ ವಿಷಯಗಳಲ್ಲಿ ಕಾಂಗ್ರೆಸ್‌ನದು ದ್ವಿಮುಖ ನೀತಿ: ಪ್ರಧಾನಿ ಮೋದಿ ಆರೋಪ ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರವಿದೆ. ಮುಖ್ಯಮಂತ್ರಿಗಳನ್ನು ಕೇವಲ ಗುಮಾಸ್ತನ ಮಟ್ಟಕ್ಕೆ ಕಾಂಗ್ರೆಸ್‌ ಇಳಿಸಿದೆ: ಪ್ರಧಾನಿ ಮೋದಿ. ಕಾಂಗ್ರೆಸ್‌ನ ಜತೆಗಿನ ಅತೃಪ್ತಿಯಿಂದ ಹುಟ್ಟಿಕೊಂಡ ಪಕ್ಷಗಳೆಲ್ಲ ಈಗ ಬಿಜೆಪಿಯನ್ನು ಎದುರಿಸಲು ಅದೇ ಕಾಂಗ್ರೆಸ್‌ ಜತೆ ಕೈಜೋಡಿಸುತ್ತಿವೆ: ಪ್ರಧಾನಿ ಮೋದಿ. ಒಬ್ಬ ವ್ಯಕ್ತಿಯ ವಿರುದ್ಧ ಇಡೀ ವಿರೋಧ ಪಕ್ಷಗಳು ಒಗ್ಗೂಡುತ್ತಿರುವ ಮೊದಲ ನಿರ್ದರ್ಶನವಿದು: ಪ್ರಧಾನಿ ಮೋದಿ.  ನಮ್ಮ ಸಂಘಟನಾಶಕ್ತಿಯೇ ನಾವು ಎಷ್ಟು ಬಲಿಷ್ಠರೆಂಬುದನ್ನು ತೋರಿಸುತ್ತದೆ: ಪ್ರಧಾನಿ ಮೋದಿ. ಈ ದೇಶವನ್ನು ಅಭಿವೃದ್ಧಿ ಪಥದಲ್ಲಿ ಅತ್ಯುನ್ನತ ಸ್ಥಾನಕ್ಕೇರಿಸುವ ಶಕ್ತಿ ಬಿಜೆಪಿಗೆ ಮಾತ್ರವೇ ಇದೆ: ಪ್ರಧಾನಿ ಮೋದಿ. ಈ ಸರಕಾರದ ಮೇಲೆ ಒಂದೇ ಒಂದೂ ಭ್ರಷ್ಟಾಚಾರದ ಕಳಂಕವಿಲ್ಲ: ಪ್ರಧಾನಿ ಮೋದಿ

ಸರ್ದಾರ್ ಪಟೇಲ್‌ ಅವರು ಸ್ವಾತಂತ್ರ್ಯಾನಂತರ ಮೊದಲ ಪ್ರಧಾನಿಯಾಗಿದ್ದಿದ್ದರೆ ದೇಶದ ಗತಿಯೇ ಬದಲಾಗುತ್ತಿತ್ತು: ಪ್ರಧಾನಿ ಮೋದಿ ಅಭಿವೃದ್ಧಿಯೇ ನಮ್ಮ ಏಕೈಕ ಧ್ಯೇಯ: ಪ್ರಧಾನಿ ಮೋದಿ ಸಾಮಾನ್ಯ ವರ್ಗದ ಬಡವರಿಗೆ ಶೇ 10ರ ಮೀಸಲಾತಿಯನ್ನು ಈಗಾಗಲೇ ಮೀಸಲು ಸೌಲಭ್ಯ ಪಡೆಯುತ್ತಿರುವವರಿಗೆ ತೊಂದರೆಯಾಗದಂತೆ ನೀಡಲಾಗಿದೆ: ಪ್ರಧಾನಿ ಮೋದಿ. ಈಗಾಗಲೇ ಮೀಸಲು ಸೌಲಭ್ಯ ಪಡೆದವರಿಗೆ ಧಕ್ಕೆಯಾಗದಂತೆ ಹೊಸ ಮೀಸಲು ಸೌಲಭ್ಯ ಕಲ್ಪಿಸಲಾಗಿದೆ. ಯುಪಿಎ ಆಡಳಿತಾವಧಿಯಲ್ಲಿ 10 ಅಮೂಲ್ಯ ವರ್ಷಗಳು ಭಾರತಕ್ಕೆ ನಷ್ಟವಾಗಿವೆ.  ನಾವು ಎಲ್ಲ ಸವಾಲುಗಳನ್ನೂ ಪ್ರಾಮಾಣಿಕತೆಯಿಂದ ಎದುರಿಸುತ್ತೇವೆ.  ನನ್ನ ಸರಕಾರ ಜಾರಿಗೊಳಿಸಿದ ಯಾವುದೇ ಯೋಜನೆಗೆ ನನ್ನ ಹೆಸರು ಹಾಕಿಲ್ಲ: ಪ್ರಧಾನಿ ಮೋದಿ.
ಸ್ವಂತಕ್ಕಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ- ಇದು ಬಿಜೆಪಿ ಕಾರ್ಯಕರ್ತನಿಗೆ ಕಲಿಸುವ ಮೊದಲ ಪಾಠ. 2014ರ ಮೊದಲು ಸಾರ್ವಜನಿಕ ಹಣವನ್ನು ಖಾಸಗಿ ಸಂಪತ್ತು ಎಂದು ಭಾವಿಸಲಾಗುತ್ತಿತ್ತು. ಭ್ರಷ್ಟರಿಗೆ ಮುಕ್ತವಾಗಿ ಸಾಲ ನೀಡಲಾಗುತ್ತಿತ್ತು: ಪ್ರಧಾನಿ ಮೋದಿ.

About the author

ಕನ್ನಡ ಟುಡೆ

Leave a Comment