ಸಿನಿ ಸಮಾಚಾರ

ಸಲ್ಮಾನ್‌ರಂತೆಯೇ ಇರುವ ಅಭಿಮಾನಿಯನ್ನು ನೋಡಿ ಬಿಗ್ ಬಿ ಶಾಕ್

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸದ್ಯಕ್ಕೆ ಬದ್ಲಾ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬಿಝಿಯಾಗಿದ್ದಾರೆ. ಶಾರುಖ್ ಖಾನ್ ಪ್ರೊಡಕ್ಷನ್ ಹೌಸ್ ನಿರ್ಮಾಣದ ಸಿನಿಮಾ ಇದು. ಇಬ್ಬರೂ ಈ ಸಿನಿಮಾವನ್ನು ಭರ್ಜರಿಯಾಗಿಯೇ ಪ್ರೊಮೋಟ್ ಮಾಡುತ್ತಿದ್ದಾರೆ. ಈ ರೀತಿ ಪ್ರಚಾರ ಮಾಡಬೇಕಾದರೆ ಶಾರುಖ್ ಹಾಗೂ ಬಚ್ಚನ್ ಇಬ್ಬರೂ ಹರಟೆ ಹೊಡೆಯುತ್ತಾ ತಮಾಷೆಯಾಗಿ ಇಬ್ಬರೂ ಒಬ್ಬರನ್ನೊಬ್ಬರು ಪ್ರಶ್ನೆಗಳನ್ನು ಕೇಳುತ್ತಾ ತಮ್ಮ ವೃತ್ತಿ ಬದುಕಿನಲ್ಲಿ ಎದುರಾದ ಕೆಲವು ಆಸಕ್ತಿಕರ ಘಟನೆಗಳನ್ನು ಮೆಲುಕು ಹಾಕಿದರು. ಇದೇ ಸಂದರ್ಭದಲ್ಲಿ ಬಿಗ್ ಬಿ ತಮ್ಮ ಜೀವನದಲ್ಲಿ ಎದುರಾದ ಒಂದು ಘಟನೆಯನ್ನು ನೆನಪಿಸಿಕೊಂಡರು.

ಒಮ್ಮೆ ಏನಾಯಿತು ಎಂದರೆ ಅಭಿಮಾನಿಯೊಬ್ಬರನ್ನು ನೋಡಿ ಸಲ್ಮಾನ್ ಖಾನ್ ಎಂದು ತಪ್ಪಾಗಿ ಭ್ರಮಿಸಿದ್ದಾಗಿ ಹೇಳಿದ್ದಾರೆ. ಚಿತ್ರೀಕರಣದಲ್ಲಿ ಕಾಣಿಸಿಕೊಂಡ ಅವರನ್ನು ನೋಡಿ ಸಲ್ಮಾನ್ ಖಾನ್ ಬಂದಿದ್ದಾನೆ ಎಂದು ತಾನು ಮೋಸ ಹೋದ ಘಟನೆಯನ್ನು ಮೆಲುಕು ಹಾಕಿದ್ದಾರೆ. ಆ ಅಭಿಮಾನಿ ನೋಡಲು ಥೇಟ್ ಸಲ್ಮಾನ್ ಖಾನ್ ರೀತಿಯೇ ಇದ್ದು, ಕೆಲವರು “ಹೇ ಸಲ್ಮಾನ್ ಖಾನ್ ಹೇಗಿದ್ದೀರಾ ಎಂದು ಕೂಗುತ್ತಿದ್ದರು” ಎಂದಿದ್ದಾರೆ. ಆಗ ಬಿಗ್ ಬಿಯನ್ನು ಶಾರುಖ್ ನೀವೇನು ಹೇಳಿದಿರಿ ಎಂದು ಕೇಳಿದರು. ಅವರನ್ನು ನೋಡಿ ನಾನೂ ಕೈ ಎತ್ತಿದ್ದೆ. ಬಳಿಕ ಅಸಲಿ ಸಂಗತಿ ಗೊತ್ತಾಗಿ ಸುಮ್ಮನಾಗಿದ್ದೆ ಎಂದಿದ್ದಾರೆ. ಈ ಅಭಿಮಾನಿ ಬಗ್ಗೆ ಈ ಹಿಂದೊಮ್ಮೆ ಅಮಿತಾಬ್ ಟ್ವೀಟ್ ಮಾಡಿ ತಿಳಿಸಿದ್ದರು.

About the author

ಕನ್ನಡ ಟುಡೆ

Leave a Comment