ಸಿನಿ ಸಮಾಚಾರ

ಸಲ್ಮಾನ್ ಖಾನ್ ಅಭಿನಯದ ‘ರೇಸ್ 3’ ಪೋಸ್ಟರ್ ಬಿಡುಗಡೆ

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿಯನದ ಬಹುನಿರೀಕ್ಷಿತ ರೇಸ್ 3 ಚಿತ್ರದ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿದೆ. ರೇಸ್ 3 ಚಿತ್ರದಲ್ಲಿ ಸಿಕಂದರ್ ಪಾತ್ರದಲ್ಲಿ ಸಲ್ಮಾನ್ ಖಾನ್ ಅಭಿನಯಿಸಿದ್ದು. ಟ್ವಿಟರ್ ನಲ್ಲಿ ಫಸ್ಟ್  ಲುಕ್ ನ್ನು ಅನಾವರಣಗೊಳಿಸಿದ್ದಾರೆ.

ನನ್ನ ಹೆಸರು ಸಿಕಂದರ್ ರೇಸ್ 3 ಕುಟುಂಬದೊಂದಿಗೆ  ನಿಮ್ಮನ್ನು ಭೇಟಿಯಾಗುತ್ತಿದ್ದೇನೆ ಎಂದು ಸಲ್ಮಾನ್ ಖಾನ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.ರೇಮೊ ಡಿಸೋಜಾ ಈ ಚಿತ್ರದ ನಿರ್ದೇಶಕರು ಹಾಗೂ ಛಾಯಾಗ್ರಾಹಕರಾಗಿದ್ದಾರೆ. ಜೂನ್  ತಿಂಗಳ ಈದ್ ಮಿಲಾದ್ ಗೆ ಈ ಚಿತ್ರ ತೆರೆಗೆ ಅಪ್ಪಳಿಸಲಿದೆ ಎಂದು ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.

.

 

About the author

ಕನ್ನಡ ಟುಡೆ

Leave a Comment