ಕ್ರೀಡೆ

ಸಾನಿಯಾ-ಮಲಿಕ್ ದಂಪತಿಗೆ ಗಂಡು ಮಗು ಜನನ, ಖುಷಿ ಹಂಚಿಕೊಂಡ ಶೊಯೆಬ್ ಮಲಿಕ್

ನವದೆಹಲಿ: ಕ್ರಿಕೆಟಿಗ ಶೊಯೆಬ್ ಮಲಿಕ್ ಹಾಗೂ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ದಂಪತಿಗೆ ಗಂಡು ಮಗು ಜನನವಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಶೊಯೆಬ್ ಮಲಿಕ್ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಸಂತಸ ಹಂಚಿಕೊಂಡಿರುವ ಅವರು, ನನ್ನ ಮಗು ಮತ್ತು ನನ್ನಾಕೆ ಆರೋಗ್ಯದಿಂದಿದ್ದು, ನಿಮ್ಮ ಹಾರೈಕೆಗೆ ಧನ್ಯವಾದಗಳು ಎಂದು ಶೊಯೆಬ್ ಟ್ವೀಟ್ ಮಾಡಿದ್ದಾರೆ.
ಇನ್ನು ಶೊಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ದಂಪತಿಗೆ ವಿಶ್ವಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಪಾಕಿಸ್ತಾನದ ಕ್ರಿಕೆಟಿಗರು ಸೇರಿದಂತೆ ವಿಶ್ವದಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಈ ಹಿಂದೆ ಗರ್ಭಿಣಿಯಾಗಿದ್ದ ಸಾನಿಯಾ 2017ರ ಅಕ್ಟೋಬರ್ ನಿಂದಲೇ ಟೆನಿಸ್ ನಿಂದ ದೂರ ಉಳಿದಿದ್ದರು. ಇತ್ತೀಚೆಗೆ ನಡೆದ ಸಾನಿಯಾ ಅವರ ಸೀಮಂತ ಕಾರ್ಯಕ್ರಮ ಕೂಡ ವ್ಯಾಪಕ ವೈರಲ್ ಆಗಿತ್ತು. ಇನ್ನು ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಸಾನಿಯಾ 2020 ಟೋಕಿಯೋ ಒಲಿಂಪಿಕ್ಸ್ ಹೊತ್ತಿಗೆ ಟೆನ್ನಿಸ್ ಕೋರ್ಟ್ ಗೆ ವಾಪಸ್ ಆಗುವ ಆಶಯ ವ್ಯಕ್ತಪಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment