ರಾಷ್ಟ್ರ ಸುದ್ದಿ

ಸಾಮಾನ್ಯ ವರ್ಗದ 10ರಷ್ಟು ಮೀಸಲಾತಿ: ವಿವರಣೆ ಕೋರಿ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟೀಸ್

ನವದೆಹಲಿ: ಸಾಮಾನ್ಯ ವರ್ಗಕ್ಕೆ ಸೇರಿದ ಬಡವರಿಗೆ  ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 10ರಷ್ಟು ಮೀಸಲಾತಿ ನೀಡುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸ್ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಕೇಂದ್ರಕ್ಕೆ ನೋಟೀಸ್ ಜಾರಿಮಾಡಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ ಶುಕ್ರವಾರ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋತೀಸ್ ಜಾರಿ ಮಾಡಿದೆ. ಕೇಂದ್ರ ಜಾರಿಗೆ ತಂದಿರುವ ಸಾಮಾನ್ಯ  ವರ್ಗದ ಬಡವರಿಗೆ ಮೀಸಲಾತಿ ನಿಯಮವು  ಸಂವಿಧಾನ ತಿದ್ದುಪಡಿ ಕಾಯಿದೆ 103ರ ಸಿಂಧುತ್ವವನ್ನು ಪ್ರಶ್ನಿಸುವಂತಿದೆ ಎಂದು ವಿವಿಧ ಸಂಘಟನೆಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದವು.”ನಾವು ಈ ವಿಚಾರವನ್ನು ಪರಿಶೀಲಿಸಲು ಒಪ್ಪಿಕೊಂಡಿದ್ದೇವೆ.ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋತೀಸ್ ನೀಡಿದ್ದು ಸರ್ಕಾರ ನಾಲ್ಕು ವಾರಗಳಲ್ಲಿ ಉತ್ತರಿಸಬೇಕು” ನ್ಯಾಯಪೀಠ ಹೇಳಿದೆ. ಆದರೆ ಕೇಂದ್ರದ ಮೀಸಲಾತಿ ನಿರ್ಧಾರಕ್ಕೆ ಕೋರ್ಟ್ ತಡೆ ನಿಡಲಿಲ್ಲ. ಚುನಾವಣೆಗೆ ಇನ್ನೇನು ಕೆಲವೇ ತಿಂಗಳಿರುವಂತೆಯೇ ನರೇಂದ್ರ ಮೊದಿ ನೇತೃತ್ವದ ಕೇಂದ್ರ ಸರ್ಕಾರವೌ ಸಾಮಾನ್ಯ ವರ್ಗದ ಬಡವರಿಗೆ ಸರ್ಕಾರಿ ಉದ್ಯೋಗ ಹಾಗೂ ಶಿಖ್ಶಣದಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ ಕಾನೂನು ತಿದ್ದುಪಡಿಯನ್ನು ಜಾರಿಗೆ ತಂದಿದ್ದು ಬಡ ಮದ್ಯಮ ವರಗದ ಬಹುಮಂದಿಗೆ ಅನುಕೂಲಕರವಾಗಿ ಮಾರ್ಪಟ್ಟಿದೆ. ಜನಹಿತ ಅಭಿಯಾನ್, ಯೂತ್ ಫಾರ್ ಈಕ್ವಾಲಿಟಿ ಸೇರಿ ನಾನಾ ಸಂಘಟನೆಗಳು ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು.

About the author

ಕನ್ನಡ ಟುಡೆ

Leave a Comment