ರಾಜ್ಯ ಸುದ್ದಿ

ಸಾಲದ ದೊರೆ ವಿಜಯ್ ಮಲ್ಯಗಿಲ್ಲ ನಿರಾಳ: ರೂ.3,100 ಕೋಟಿ ಠೇವಣಿ ಇಡಲೇಬೇಕೆಂದ ಹೈಕೋರ್ಟ್

ಬೆಂಗಳೂರು: ಕಿಂಗ್ ಫಿಶರ್ ಏರ್’ಲೈನ್ಸ್ ಸಂಸ್ಥೆಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 15 ಬ್ಯಾಂಕ್ ಗಳ ಒಕ್ಕೂಟದಿಂದ ಪಡೆದಿರುವ ಒಟ್ಟು ಸಾಲದ ಮೊತ್ತದ ಪೈಕಿ ರೂ.3,100 ಕೋಟಿಯನ್ನು ಠೇವಣಿ ಇರಿಸುವಂತೆ ಸೂಚಿಸಿದ್ದ ಸಾಲ ವಸೂಲಾತಿ ಮೇಲ್ಮನವಿ ಪ್ರಾಧಿಕಾರ (ಡಿಆರ್’ಎಟಿ) ಆದೇಶ ಪ್ರಶ್ನಿಸಿ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ನ್ಯಾಯಾಲಯ ವಜಾಗೊಳಿಸಿದೆ.
ಅರ್ಜಿಯನ್ನು ವಿಚಾರಣೆ ನಡೆದಿ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ನೇತೃದ್ವದ ವಿಭಾಗೀಯ ನ್ಯಾಯಪೀಠ, ಡಿಆರ್’ಎಟಿ ಆದೇಶವು ಸೂಕ್ತವಾಗಿದೆ. ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯತೆ ಕಂಡುಬಂದಿಲ್ಲ ಎಂದು ತಿಳಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ. ಕಿಂಗ್ ಫಿಶರ್ ಏರ್’ಲೈನ್ಸ್ ಗಾಗಿ ಪಡೆದಿದ್ದ ರೂ.6 ಸಾವಿರ ಕೋಟಿ ಸಾಲವನ್ನು ಮರು ಪಾವತಿಸಿದ ಮಲ್ಯ ವಿರುದ್ಧ ಎಸ್’ಬಿಐ ಸೇರಿದಂತೆ ಇರತೆ ಬ್ಯಾಂಕ್ ಗಳು 2013ರಲ್ಲಿ ಡಿಆರ್’ಎಟಿ ಮೆಟ್ಟಿಲೇರಿದ್ದವು. ಈ ಅರ್ಜಿಗಳನ್ನು ಸುದೀರ್ಘ ವಿಚಾರಣೆ ನಡೆಸಿದ್ದ ಸಾಲ ವಸೂಲಾತಿ ನ್ಯಾಯಾಧಿಕರಣ, ಸಾಲದ ಮೊತಕ್ಕೆ ವಾರ್ಷಿಕ ಶೇ.11.5 ಬಡ್ಡಿ ಸೇರಿಸಿ ಮರು ಪಾವತಿಸುಂತೆ 2017ರ ಜ.19ರಂದು ವಿಜಯ್ ಮಲ್ಯ ಅವರಿಗೆ ಆದೇಶಿಸಿತ್ತು. ತಪ್ಪಿದರೆ, ಮಲ್ಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕ್ ಗಳಿಗೆ ಅನುಮತಿ ನೀಡಿತ್ತು.
ಇದನ್ನು ಪ್ರಶ್ನಿಸಿ ಕಿಂಗ್ ಫಿಶರ್ ಫಿನ್ ವೆಸ್ಟ್ ಇಂಡಿಯಾ ಲಿಮಿಟೆಡ್ ಡಿಆರ್’ಎಟಿ ಮೊರೆ ಹೋಗಿತ್ತು. ಆದರೆ, ಮೇಲ್ಮನಿ ವಿಚಾರಣೆ ನಡೆಸಲು ಸಾಲದ ಮೊತ್ತ ಶೇ.50 ರಷ್ಟು ಹಣವನ್ನು ಠೇವಣಿ ಇರಿಸುವಂತೆ ಡಿಆರ್’ಎಟಿ ಏ.3 ರಂದು ಅರ್ಜಿದಾರರಿಗೆ ನಿರ್ದೇಶಿಸಿತ್ತು. ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥಗಳ ಸಾಲ ವಸೂಲಾತಿ (ತಿದ್ದುಪಡಿ) ಕಾಯ್ದೆ-2016ರ ಪ್ರಕಾರ, ಸಾಲ ವಸೂಲಾತಿ ನ್ಯಾಯಾಧೀಕರಣದಲ್ಲಿ ವಿಚಾರಣೆ ನಡೆಯುವ ವೇಳೆ ಒಟ್ಟು ಸಾಲದ ಮೊತ್ತದ ಶೇ.25ರಿಂದ 50ರವರೆಗೆ ಠೇವಣಿ ಇರಿಸಿಕೊಳ್ಳದೆಯೇ ವಿಚಾರಣೆ ನಡೆಸಬಹುದು. ಹೀಗಿದ್ದರೂ ಸಾಲದ ಮೊತ್ತದ ಶೇ.50 ಹಣವನ್ನು ಠೇವಣಿ ಇರಿಸಲು ಡಿಆರ್’ಎಟಿ ಆದೇಶಿಸಿದೆ. ಹೀಗಾಗಿ ಈ ಆದೇಶ ರದ್ದುಪಡಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

About the author

ಕನ್ನಡ ಟುಡೆ

Leave a Comment