ರಾಜ್ಯ ಸುದ್ದಿ

ಸಾಲಮನ್ನಾ ಎಂಬುದು ರೈತರ ಮೇಲಿನ ಅಪಹಾಸ್ಯ: ನರೇಂದ್ರ ಮೋದಿ

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಾಲಮನ್ನಾ ವಿಷಯ ರೈತರ ಮೇಲಿನ ಕೆಟ್ಟ ಅಪಹಾಸ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಬೆಳಗಾವಿ, ಬೀದರ್, ಧಾರವಾಡ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ  ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಮೋದಿ, ರಾಜ್ಯ ಸಮ್ಮಿಶ್ರ ಸರ್ಕಾರ ಮ್ಯುಸಿಕಲ್ ಚೇರ್ ಆಡುತ್ತಿದೆ.  ಸಾಲಮನ್ನಾ ಹೆಸರಿನಲ್ಲಿ ಅವರು ಏನು ಮಾಡುತ್ತಿದ್ದಾರೋ ಅದು ಅತಿ ಕ್ರೂರವಾದದ್ದು ಎಂದು ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬದು ಆರು ತಿಂಗಳು ಕಳೆದರೂ ಸರ್ಕಾರ ರೈತರ ಸಾಲಮನ್ನಾ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ, ಕೇವಲ ಆಶ್ವಾಸನೆ ನೀಡುತ್ತಾ ಬಂದಿದ್ದಾರೆ ಎಂದು ಹೇಳಿದ್ದಾರೆ, ರೈತರ ಸಾಲಮನ್ನಾದಿಂದ ಸರ್ಕಾರಕ್ಕೆ ಮಾತ್ರ ಕೈ ತುಂಬಾ ಉಪಯೋಗವಾಗಲಿದೆ ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment