ಸಿನಿ ಸಮಾಚಾರ

ಸಾವಿನ ಸೂಚನೆ ಸಿಕ್ಕಿತ್ತಾ, 4 ತಿಂಗಳ ಹಿಂದೆ ಮಗನಿಗೆ ಪಿತ್ರಾರ್ಜಿತ ಆಸ್ತಿ ವರ್ಗಾಯಿಸಿದ್ದ ಅಂಬರೀಶ್

ಮಂಡ್ಯ: ತಾನು ಇನ್ನು ಹೆಚ್ಚು ದಿನ ಬದುಕಲ್ಲ ಅನ್ನೋ ಸುಳಿವು ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಮೊದಲೇ ಸಿಕ್ಕಿತ್ತು ಅನಿಸುತ್ತೆ ಹೀಗಾಗಿಯೇ ಕಳೆದ ನಾಲ್ಕು ತಿಂಗಳ ಹಿಂದೆಯೇ ತನ್ನ ಹೆಸರಿನಲ್ಲಿದ್ದ ಪಿತ್ರಾರ್ಜಿತ ಆಸ್ತಿಯನ್ನು ಮಗನ ಹೆಸರಿಗೆ ವರ್ಗಾಯಿಸಿದ್ದರು. ಅಂಬರೀಶ್ ಅವರ ಹುಟ್ಟೂರು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಗ್ರಾಮದಲ್ಲಿ 7 ಎಕರೆಯಷ್ಟು ಪಿತ್ರಾರ್ಜಿತ ಆಸ್ತಿ ಇತ್ತು. ಕಳೆದ ನಾಲ್ಕು ತಿಂಗಳ ಹಿಂದೆ ತಮ್ಮ ಪುತ್ರ ಅಭಿಶೇಕ್ ಜತೆ ಮದ್ದೂರು ಪಟ್ಟಣದಲ್ಲಿರುವ ಸಬ್ ರಿಜಿಸ್ಟಾರ್ ಕಚೇರಿಗೆ ಆಗಮಿಸಿ ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನು ಮಗನ ಹೆಸರಿಗೆ ವರ್ಗಾಯಿಸಿದ್ದರು. ಜುಲೈ 26ರಂದು ಅಂಬಿ ಮದ್ದೂರಿನ ಸಬ್ ರಿಜಿಸ್ಟಾರ್ ಕಚೇರಿಗೆ ಬಂದಿದ್ದರು. ಅಂದು ಯಾವುದೇ ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡರಲಿಲ್ಲ. ಆದರೆ ಅಂಬರೀಶ್ ಅವರಿಗೆ ತಮ್ಮ ಆರೋಗ್ಯ ಕ್ಷೀಣಿಸುತ್ತಿರುವುದು ತಮ್ಮ ಅರಿವಿಗೆ ಬಂದಿತ್ತು ಅನಿಸುತ್ತೆ.
ನವೆಂಬರ್ 24ರ ಶನಿವಾರ ರಾತ್ರಿ ಅಂಬರೀಶ್ ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗತ್ತು. ಅಷ್ಟರಲ್ಲಾಗಲೇ ಅಂಬರೀಶ್ ಇಹ ಲೋಕ ತ್ಯಜಿಸಿದ್ದರು. ಸೋಮವಾರ ಸಂಜೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

About the author

ಕನ್ನಡ ಟುಡೆ

Leave a Comment