ರಾಷ್ಟ್ರ ಸುದ್ದಿ

ಸಿಂಧೂ ನದಿ: 40 ದಿನದಲ್ಲೇ ಅತೀ ಉದ್ದದ ಸೇತುವೆ ನಿರ್ಮಾಣ, ಭಾರತೀಯ ಯೋಧರಿಂದ ದಾಖಲೆ

ನವದೆಹಲಿ: ಸಿಂಧೂ ನದಿಯ ಲೇಹ್ ನಲ್ಲಿ ಬರೋಬ್ಬರಿ 260 ಅಡಿ ಉದ್ದದ ಕೇಬಲ್ ಸೇತುವೆ ನಿರ್ಮಾಣ ಮಾಡಿ ಭಾರತೀಯ ಯೋಧರು ದಾಖಲೆ ಬರೆದಿದ್ದಾರೆ. ಕೇವಲ 40 ದಿನಗಳಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ.
ಇದಕ್ಕೆ ಮೈತ್ರಿ ಸೇತುವೆ ಎಂದು ನಾಮಕರಣ ಮಾಡಲಾಗಿದೆ. ಇದರ ನಿರ್ಮಾಣಕ್ಕಾಗಿ 500 ಟನ್ ಗಳಷ್ಟು ನಿರ್ಮಾಣ ಸಾಮಗ್ರಿ ಬಳಕೆ ಮಾಡಲಾಗಿದೆ. ಇದು ಭಾರತೀಯ ಯೋಧರಿಂದ ನಿರ್ಮಾಣವಾಗಿರುವ ವೈಯಕ್ತಿಕ ದಾಖಲೆಯಾಗಿದೆ. ಭಾರತೀಯ ಯೋಧರ ಈ ದಾಖಲೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಕಡಿಮೆ ದಿನಗಳಲ್ಲಿ ಸೇತುವೆ ನಿರ್ಮಾಣವಾಗಿರುವುದಕ್ಕಾಗಿ ಸ್ಥಳೀಯರು ಕೂಡ ಶಬ್ಬಾಸ್ ಗಿರಿ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment