ರಾಜ್ಯ ಸುದ್ದಿ

ಸಿಎಂ ಆಡಿಯೋ ಬಾಂಬ್​ಗೆ ಪ್ರತಿಯಾಗಿ ವಿಡಿಯೋ ಬಾಂಬ್​ ಸಿಡಿಸಿದ ಬಿಜೆಪಿ

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಸಿಡಿಸಿದ್ದ ಆಪರೇಷನ್​ ಆಡಿಯೋ ಬಾಂಬ್​ಗೆ ಪ್ರತಿಯಾಗಿ ಬಿಜೆಪಿ ವಿಡಿಯೋ ಬಾಂಬ್​ ಸಿಡಿಲು ಸಿದ್ಧವಾಗಿದೆ. ಕುಮಾರಸ್ವಾಮಿ ಅವರು ವಿಧಾನ ಪರಿಷತ್​ ಸದಸ್ಯರನ್ನಾಗಿ ಮಾಡಲು ಪರಿಷತ್​ ಆಕಾಂಕ್ಷಿಯಿಂದ 25 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಅವರು ಹಣಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ನಮ್ಮ ಬಳಿ ಇದೆ. ಸೋಮವಾರ ಸ್ಪೀಕರ್​ ರಮೇಶ್​ ಕುಮಾರ್​ ಅವರಿಗೆ ವಿಡಿಯೋವನ್ನು ಕೊಡುತ್ತೇವೆ. ಆಗ ಯಾರು ಯಾರಿಗೆ ಆಮಿಷ ಒಡ್ಡಿದ್ದರು ಎಂಬುದು ಗೊತ್ತಾಗುತ್ತದೆ ಎಂದು ಶಾಸಕ ಅರವಿಂದ್​ ಲಿಂಬಾವಳಿ ತಿಳಿಸಿದ್ಧಾರೆ.

ಕುಮಾರಸ್ವಾಮಿ ಅವರು ಅನಗತ್ಯವಾಗಿ ಸ್ಪೀಕರ್​ ಅವರನ್ನು ಇದರಲ್ಲಿ ಎಳೆದು ತಂದಿದ್ದಾರೆ. ಸಿಎಂ ಈ ಆಡಿಯೋ ತಯಾರಿಸಲು ಕಂಠೀರವ ಸ್ಟುಡಿಯೋಗೆ ಹೋಗಿದ್ದರಾ. ರಮೇಶ್​ ಕುಮಾರ್​ ಅವರೆ ಹೇಳಿದ್ದಾರೆ ಯಡಿಯೂರಪ್ಪ ಅವರು ಹೀಗೆ ಮಾತನಾಡುವುದಿಲ್ಲ ಎಂದು. ಸಿಎಂ ಕುಮಾರಸ್ವಾಮಿ ಕೀಳುಮಟ್ಟದ ರಾಜಕೀಯ ಮಾಡತ್ತಿದ್ದಾರೆ ಎಂದು ಲಿಂಬಾವಳಿ ಕಿಡಿ ಕಾರಿದರು. ಇನ್ನು ನಾನು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ತೆಲಂಗಾಣ ಉಸ್ತುವಾರಿ ನೀಡಿರುವುದರಿಂದ ಅಧಿವೇಶನಕ್ಕೆ ಬರಲು ಸಾಧ್ಯವಾಗಲಿಲ್ಲ. ನಾನು ಯಾರ ಪ್ರಶ್ನೆಗೂ ಉತ್ತರ ಕೊಡುವ ಅಗತ್ಯ ಇಲ್ಲ ಎಂದು ಲಿಂಬಾವಳಿ ತಿಳಿಸಿದರು.

About the author

ಕನ್ನಡ ಟುಡೆ

Leave a Comment