ರಾಜಕೀಯ

ಸಿಎಂ ಆರೋಪ ಸತ್ಯವಾಗಿದ್ರೆ ರಾಜಕೀಯದಿಂದ ನಿವೃತ್ತಿ; ಅವರು ನೀಡಿರುವುದು ಫೇಕ್ ಆಡಿಯೋ: ಬಿಎಸ್ ವೈ ಪ್ರತಿಕ್ರಿಯೆ

ಬೆಂಗಳೂರು: ಸಿಎಂ ಕುಮಾರಸ್ವಾಮಿ ಒಳ್ಳೆಯ ಪ್ರೊಡ್ಯೂಸರ್, ಅವರು ಬಿಡುಗಡೆ ಮಾಡಿರುವ ಆಡಿಯೋ ಫೇಕ್ ಆಗಿದೆ, ನನ್ನ ವಿರುದ್ಧ ಮಾಡಿರುವುದು ಆರೋಪ ಸತ್ಯವಾದ್ರೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಮಾಜಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ವಿಧಾನ ಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಆಪರೇಷನ್ ಕಮಲದ ಬಾಂಬ್ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸಿಎಂ ಹೇಳಿಕೆ ಸತ್ಯಕ್ಕೆ ದೂರವಾದದ್ದು , ನಾನು ಯಾರನ್ನೂ ಭೇಟಿ ಮಾಡಿಲ್ಲ, ದೇವದುರ್ಗಕ್ಕೆ ಯಾವುದೋ ದೇವಸ್ಥಾನದ ಕೆಲಸಕ್ಕೆ ಹೋಗಿದ್ದೆ ಎಂದು ಹೇಳಿದ್ದಾರೆ. ನಾನು ಸ್ಪೀಕರ್ ಅವರನ್ನೆ ಬುಕ್ ಮಾಡಿದ್ದೇನೆ ಎಂದು ಆರೋಪಿಸಲಾಗಿದೆ, ಆದರೆ ಅದು ನಿಜವೇ ಆದರೆ ನಾನು ರಾಜಕೀಯ. ನಿವೃತ್ತಿ ಹೊಂದುವುದಾಗಿ ಹೇಳಿದ್ದಾರೆ. ಇನ್ನೂ ಇಂದಿನ ಬಜೆಟ್ ಅಧಿವೇಶನಕ್ಕೆ ಕಾಂಗ್ರೆಸ್  ಮತ್ತು ಜೆಡಿಎಸ್ ನ 10-11 ಶಾಸಕರು ಹಾಜರಾಗುವುದಿಲ್ಲ, ಇನ್ನು ಕೆಲವೇ ದಿನಗಳು ಕಾದು ನೋಡಿ ಎಂದು ಹೇಳಿದ್ದಾರೆ. ಬಜೆಟ್ ಮಂಡನೆಗೆ ನಾವು ಯಾವುದೇ ಅಡ್ಡಿ ಮಾಡುವುದಿಲ್ಲ, ಬಜೆಟ್ ಚರ್ಚೆಯಲ್ಲಿ ಪಾಲ್ಗೋಳ್ಳುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಕಡೆಯಿಂದ ಯಾವುದೇ ಅಡ್ಡಿಯಾಗುವುದಿಲ್ಲ, 15 ಕಾಂಗ್ರೆಸ್ ಶಾಸಕರು ಗೈರಾದ ಸಂದರ್ಭದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment