ರಾಜ್ಯ ಸುದ್ದಿ

ಸಿಎಂ ಕುಮಾರಸ್ವಾಮಿ ನನ್ನ ತಂಟೆಗೆ ಬರಬಾರದು, ನಾನು ಅವರ ಬಗ್ಗೆ ಮಾತನಾಡಿಲ್ಲ: ರೆಡ್ಡಿ

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿಯವರು ನನ್ನ ತಂಟೆಗೆ ಬರಬಾರದು. ಅವರ ಬಗ್ಗೆ ನಾನು ಎಲ್ಲೂ ಮಾತನಾಡಿಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿಯವರ ತಂಟೆಗೆ ನಾನೆಂದೂ ಹೋಗಿಲ್ಲ. ಆದರೂ ಅವರು ಹೀಗೆಲ್ಲ ಮಾಡುವುದು ಸರಿಯಲ್ಲ. ರಾಜ್ಯದಲ್ಲಿ ಪ್ರಶಾಂತವಾಗಿ ಆಡಳಿತ ನಡೆಸುತ್ತಿದ್ದಾರೆ, ಹಾಗೇ ನಡೆಸಿಕೊಂಡು ಹೋಗಲಿ ಎಂದರು. ಜನರಿಗೆ ರಕ್ಷಣೆ ಇಲ್ಲ ಎಂದು ಶ್ರೀರಾಮುಲು ಹೇಳಿದ್ದರು. ಪೊಲೀಸರಿಗೆ ಏನೂ ದೂರು ಕೊಟ್ಟಿಲ್ಲ. ದೂರು ಕೊಟ್ಟಿರುವ ಬಗ್ಗೆ ದಾಖಲೆಗಳಿದ್ದರೆ ಸಿಎಂ ತೋರಿಸಲಿ. ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಗಂಭೀರವಾಗಿ ಮಾತನಾಡಿ. ಇನ್ನು ಮೇಲಾದರೂ ಒಳ್ಳೆಯ ಹಾದಿಯಲ್ಲಿ ನಡೆಯಲಿ ಎಂದು ವ್ಯಂಗ್ಯವಾಡಿದರು.

ನಾನು ಬಳ್ಳಾರಿಯಲ್ಲಿ ಇದ್ದು ಚುನಾವಣೆ ಮಾಡುವಂತಿದ್ದರೆ ಅದು ಬೇರೆಯದೇ ಆಗುತ್ತಿತ್ತು. ಶ್ರೀರಾಮುಲು ಅವರಿಗೆ ಅವಮಾನ ಆದರೆ ಜಿಲ್ಲೆಯ ಜನರು ಸಹಿಸುವುದಿಲ್ಲ. ದಿನೇಶ್​ ಗುಂಡೂರಾವ್​ ಅವರನ್ನು ನಾನು ಲೀಡರ್​ ಎಂದು ಹೇಳುವುದೇ ಇಲ್ಲ. ಅವರೊಬ್ಬ ಡಮ್ಮಿ ಕ್ಯಾಂಡಿಡೇಟ್​. ತಂತ್ರ ಕುತಂತ್ರದಲ್ಲಿ ಡಿಕೆಶಿ ಡಾಕ್ಟರೇಟ್​ ಪಡೆದಿದ್ದಾರೆ. ಅವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರಿಗೆ ಮಾನ ಮರ್ಯಾದೆ ಇಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾಪದ ಕೊಡ ತುಂಬಿದೆ. ನಮ್ಮ ಮನೆಯಲ್ಲಿ ಗೋಲ್ಡ್​ ಕಮೋಡ್​ ಇದ್ದರೆ ವಿಡಿಯೋ ತೋರಿಸಬಹುದಿತ್ತು. ಅವರಿಗೆ ಮಾನ ಮರ್ಯಾದೆ ಇಲ್ಲ. ದೇವರು, ತಂದೆ-ತಾಯಿಯ ಮೇಲೆ ನಂಬಿಕೆ ಇಲ್ಲ ಎಂದು ತಿರುಗೇಟು ನೀಡಿದರು.

About the author

ಕನ್ನಡ ಟುಡೆ

Leave a Comment