ರಾಷ್ಟ್ರ ಸುದ್ದಿ

ಸಿಎಂ ಪರಿಕ್ಕರ್ ಆರೋಗ್ಯ ಸ್ಥಿರವಾಗಿದೆ: ಗೋವಾ ಸರ್ಕಾರ ಸ್ಪಷ್ಟನೆ

ಪಣಜಿ: ಗೋವಾ ಸಿಎಂ ಆರೋಗ್ಯ ಸ್ಥಿರವಾಗಿದ್ದು ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಗೋವಾ ಸರ್ಕಾರ ಗುರುವಾರ ಸ್ಪಷ್ಟನೆ ನೀಡಿದೆ.
ಪ್ಯಾಂಕ್ಯಿಯಾಟಿಕ್ ಸಮಸ್ಯೆಯಿಂದ ಬಳಲುತ್ತಿರುವ 62 ವರ್ಷದ ಮನೋಹರ್ ಪರಿಕ್ಕರ್ ಅವರು ಇತ್ತೀಚೆಗಷ್ಟೇ ದೆಹಲಿ ಏಮ್ಸ್ ಗೆ ದಾಖಲಾಗಿ ಮನೆಗೆ ವಾಪಸ್ ಆಗಿದ್ದರು. ಇದೀಗ ಪಣಜಿಯಲ್ಲೇ ಮನೆಯಲ್ಲಿ ಇದ್ದುಕೊಂಡು ನುರಿತ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಪರಿಕ್ಕರ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳು ಹಬ್ಬಿದ್ದು, ಪರಿಕ್ಕರ್ ಅವರ ಆರೋಗ್ಯ ಗಂಭೀರವಾಗಿದೆ ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಆತಂಕಕ್ಕೀಡಾಗಿದ್ದರು. ಈ ಬಗ್ಗೆ ಇದೀಗ ಗೋವಾ ಸರ್ಕಾರ ಸ್ಪಷ್ಟನೆ ನೀಡಿದೆ.

About the author

ಕನ್ನಡ ಟುಡೆ

Leave a Comment