ರಾಜ್ಯ ಸುದ್ದಿ

ಸಿಎಂ ಮಾತಿಗೂ ಬೆಲೆ ಇಲ್ಲ ; ಬೇಸರ ತೊಡಿಕೊಂಡ ಕುಮಾರಸ್ವಾಮಿ

ಬೆಂಗಳೂರು  : ಸಿಎಂ ಮಾಡಿದ್ದ ಆದೇಶಗಳಿಗೆ ಮನ್ನಣೆ ನೀಡದ ಅಧಿಕಾರಗಳ ವರ್ತನೆ ವಿರುದ್ದ ಕುಮಾರಸ್ವಾಮಿ ಬೇಸತ್ತಿದ್ದರು. ಈ ಹಿನ್ನೆಲೆಯಲ್ಲಿ ಮುಂದೆ ವಿಳಂಬ ಆಗದಂತೆ ಎಲ್ಲಾ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಖಡಕ್ ಸೂಚನೆ ನೀಡಿದ್ದಾರೆ.

ಸಿಎಂ ಆದೇಶ ವರ್ಗಾವಣೆ ಮಾಡಿ‌ ಆದೇಶ ಮಾಡಿದರೂ, ಕೆಲ‌‌ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮನ್ನಣೆ ನೀಡದೇ ಸಿಎಂ‌ ಆದೇಶ ಮಾಡಿದರೂ ಕೆಲ ಇಲಾಖೆಗಳು ನಿಯುಕ್ತಿ ಮಾಡುವಲ್ಲಿ ವಿಳಂಬ ಮಾಡುತ್ತಿದ್ದರು.ಇದರಿಂದ  ಐಎಎಸ್ ಅಧಿಕಾರಿಗಳ ಉದ್ಧಟತನಕ್ಕೆ ಸಿಎಂ ಗರಂ ಆಗಿದ್ದರು.

ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಜೊತೆ ಚರ್ಚೆ ನಡೆಸಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್  ಕೂಡಲೆ ಮುಖ್ಯಮಂತ್ರಿಗಳ ಆದೇಶಗಳನ್ನು ಪಾಲನೆ ಮಾಡುವಂತೆ ಸೂಚನೆ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.

About the author

ಕನ್ನಡ ಟುಡೆ

Leave a Comment