ಸಿನಿ ಸಮಾಚಾರ

ಸಿಎಂ ಸುಳ್ಳುಗಾರ: ಪಕ್ಷೇತರ ಅಭ್ಯರ್ಥಿ ಸುಮಲತಾ ಆರೋಪ

ಮಂಡ್ಯ/ಕೆ.ಆರ್.ಪೇಟೆ: ಅನುದಾನ ನೀಡಿಕೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮಂಡ್ಯ ಜನರನ್ನು ತಪ್ಪುದ ದಾರಿಗೆಳೆಯುತ್ತಿದ್ದಾರೆ. ಅನುದಾನ ನೀಡಿಕೆ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಲಿ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಆಗ್ರಹಿಸಿದರು.

ಕೆ.ಆರ್.ಪೇಟೆ ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ಪ್ರಚಾರ ಮಾಡಿದ ಅವರು, 5500 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿರುವ ಸಿಎಂ ಕುಮಾರಸ್ವಾಮಿ ಆ ಕಾಮಗಾರಿಗಳನ್ನು ಬಜೆಟ್‌ನಲ್ಲಿ ಸೇರಿಸಿದ್ದರೆ ಅದನ್ನು ದಾಖಲೆ ಸಹಿತ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಅವರ ಅದೃಷ್ಟ, ಮಂಡ್ಯ ಜಿಲ್ಲೆಯಲ್ಲೇ ಒಬ್ಬರೇ ಒಬ್ಬ ಪ್ರತಿಪಕ್ಷದ ಶಾಸಕರಿಲ್ಲ. ಹೀಗಾಗಿ ಅವರು ಹೇಳಿದ್ದೇ ಆಟವಾಗಿದೆ. ಹೀಗಾಗಿ ನನ್ನ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರ ಕೊಡಬೇಕು. ಇಲ್ಲದಿದ್ದರೆ 5500 ಕೋಟಿ ರೂ. ಅನುದಾನ ನೀಡಲಾಗಿದೆ ಎಂಬ ಮಾತುಗಳನ್ನು ಪ್ರಚಾರದಲ್ಲಿ ಹೇಳುವುದನ್ನು ನಿಲ್ಲಿಸಬೇಕು. ಇದು ಮಂಡ್ಯ ಜಿಲ್ಲೆಯ ಜನರ ಪರವಾಗಿ ನನ್ನ ಒತ್ತಾಯ ಎಂದು ಹೇಳಿದರು.

ಇದೇ ವೇಳೆ ನೆರೆದಿದ್ದ ಮಹಿಳೆಯರನ್ನು ಉದ್ದೇಶಿಸಿದ ಮಾತನಾಡಿದ ಸುಮಲತಾ ಅವರು, ಸಾಲ ಮನ್ನಾ ಬಗ್ಗೆ ಸಿಎಂ ಕುಮಾರಸ್ವಾಮಿ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ನೀವೇ ಹೇಳಿ? ನಿಮ್ಮಲ್ಲಿ ಮಂದಿ ಮಹಿಳೆಯ ಸಾಲ ಮನ್ನಾ ಆಗಿದೆ. ಎಷ್ಟು ಸೀಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ಮನ್ನಾ ಹಣ ಬಿಡುಗಡೆಯಾಗಿದೆ. ವಯಸ್ಸಾದವರಿಗೆ ಪ್ರತಿ ತಿಂಗಳು 6000ರೂ. ಪಿಂಚಣಿ ಬರುತ್ತಿದ್ದೆಯೇ? ಇಂತಹ ಸುಳ್ಳುಗಾರರಿಗೆ ನೀವು ಮತ ನೀಡುವುದು ಸರಿಯೇ ಎಂದು ಪ್ರಶ್ನಿಸಿದರು.

About the author

ಕನ್ನಡ ಟುಡೆ

Leave a Comment