ರಾಜಕೀಯ

ಸಿಎಲ್ ಪಿ ಕಾಂಗ್ರೆಸ್ ನೈಜ ಬಣ್ಣ ಬಯಲಾಗಲಿದೆ ಬಿಎಸ್ ವೈ; ನಮ್ಮ ಶಾಸಕರ ಬಗ್ಗೆ ಅವರು ಯೋಚಿಸುವ ಅಗತ್ಯವಿಲ್ಲ: ಜಿ. ಪರಮೇಶ್ವರ್

ಬೆಂಗಳೂರು: ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರ
ಸಭೆ ಕರೆದಿದ್ದಾರೆ, ಸಭೆಯ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಯಡಿಯೂರಪ್ಪ ಸಿಎಲ್ ಪಿ ಸಭೆಯಿಂದ ಕಾಂಗ್ರೆಸ್ ನೈಜ ಬಣ್ಣ ಬಯಲಾಗಲಿದೆ ಎಂದು ಹೇಳಿದ್ದಾರೆ. ಶಾಸಕಾಂಗ ಸಭೆ ಜೆಡಿಎಸ್ ಕಾಂಗ್ರೆಸ್ ಗೆ ಸೇರಿದ್ದು, ಅವರ ಎಲ್ಲಾ ಸಮಸ್ಯೆಗಳಿಗೆ ನಾನು ಹೊಣೆಯಲ್ಲ, ನಮ್ಮ 104 ಶಾಸಕರು  ನಮ್ಮ ಪಕ್ಷದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು,  ಹಾಗೂ ನಾವು ಲೋಕಸಭೆ ಚುನಾವಣೆ ಬಗ್ಗೆ ಯೋಚಿಸುತ್ತಿದ್ದೇವೆ  ಎಂದು ಯಡಿಯೂರಪ್ಪ ಹೇಳಿದ್ದಾರೆ.
ಇನ್ನೂ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ನಾವು ಸಿಎಲ್ ಪಿ ಸಭೆಯಲ್ಲಿ  ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲಾಗುತ್ತದೆ. ಹಾಗೂ ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚಿಸಲಾಗುವುದು ಎಂದು ಹೇಳಿದ್ದಾರೆ. ಎಲ್ಲಾ ಶಾಸಕರು ಸಿಎಲ್ ಪಿ ಸಭೆಯಲ್ಲಿ ಭಾಗವಹಿಸುತ್ತಾರೆ, ನಮ್ಮ ಶಾಸಕರ ಬಗ್ಗೆ ಯಡಿಯೂರಪ್ಪ ಅವರು ಚಿಂತಿಸುವ ಅಗತ್ಯವಿಲ್ಲ ಎಂದು ಪರನೇಶ್ವರ್ ಟಾಂಗ್ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment