ರಾಷ್ಟ್ರ ಸುದ್ದಿ

ಸಿಕ್ಕಿಂನಲ್ಲಿ ಭಾರೀ ಹಿಮಪಾತ: ಭಾರತೀಯ ಸೇನೆಯಿಂದ 3 ಸಾವಿರ ಪ್ರವಾಸಿಗರ ರಕ್ಷಣೆ

ಗ್ಯಾಂಗ್ಟಕ್: ಭಾರತ-ಚೀನಾ ಗಡಿಯ ಸಿಕ್ಕಿಂನ ಗ್ಯಾಂಗ್ಟಕ್ ಬಳಿಯ ನಾಥು ಲಾ ಪ್ರದೇಶದಲ್ಲಿ ಕಳೆದ ರಾತ್ರಿ ಸಂಭವಿಸಿದ ಭಾರೀ ಹಿಮಪಾತದಿಂದಾಗಿ 400ಕ್ಕೂ ಹೆಚ್ಚು ವಾಹನಗಳಲ್ಲಿ ಸಿಲುಕಿದ್ದ 3 ಸಾವಿರ ಮಂದಿ ಪ್ರವಾಸಿಗರನ್ನು ಭಾರತೀಯ ಸೇನಾ ಪಡೆ ರಕ್ಷಿಸಿದೆ.
ಭಾರೀ ಹಿಮಪಾತದಿಂದಾಗಿ ಸುಮಾರು 400ಕ್ಕೂ ಹೆಚ್ಚು ವಾಹನಗಳಲ್ಲಿ ಸಿಲುಕಿದ್ದ 2,500 ಜನರನ್ನು ರಕ್ಷಣಾ ಪಡೆ ರಕ್ಷಿಸಿದೆ. ಅವರಿಗೆ ಅವರಿಗೆ ಆಹಾರ, ವಸತಿ ಮತ್ತು ವೈದ್ಯಕೀಯ ನೆರವನ್ನೂ ಒದಗಿಸಲಾಗಿದೆ ಎಂದು ತಿಳಿಸಿದೆ. ಪೂರ್ವ ಸಿಕ್ಕಿಂ ಜಿಲ್ಲೆಯ ನಾಥು ಲಾ ಒಂದು ಪರ್ವತ ಮಾರ್ಗವಾಗಿದ್ದು, ಸಮುದ್ರ ಮಟ್ಟಕ್ಕಿಂತ ಸರಾಸರಿ 4,310 ಮೀ (14,140 ಅಡಿ) ಎತ್ತರದಲ್ಲಿದೆ. ಗ್ಯಾಂಗ್ಟಕ್ ನಲ್ಲಿ ಪರವಾನಗಿ ಪಡೆದ ಬಳಿಕ ಈ ಪ್ರದೇಶಕ್ಕೆ ಭಾರತೀಯರು ಮಾತ್ರ ಪ್ರವೇಶಿಸಬಹುದಾಗಿದೆ. ರಸ್ತೆಯಲ್ಲಿ ಭಾರೀ ಪ್ರಮಾಣದ ಹಿಮ ಮಡುಗಟ್ಟಿರುವುದರಿಂದ ಪ್ರವಾಸಿಗರನ್ನು ಬೇರೆಡೆ ಸಾಗಿಸಲು ಸೇನೆಗೆ ಸಾಧ್ಯವಾಗಿಲ್ಲ, ಹೀಗಾಗಿ ಪ್ರವಾಸಿಗರನ್ನು ಪುನರ್ವಸತಿ ಕೇಂದ್ರದಲ್ಲಿರಿಸಲಾಗಿದೆ,

About the author

ಕನ್ನಡ ಟುಡೆ

Leave a Comment