ರಾಜಕೀಯ

ಸಿಗದ ಮ್ಯಾಜಿಕ್ ನಂಬರ್ ಶಾಸಕರು: ಬರಿಗೈಲಿ ಬೆಂಗಳೂರಿಗೆ ವಾಪಸಾದ ರಮೇಶ್ ಜಾರಕಿಹೊಳಿ

ಬೆಳಗಾವಿ: ಸಚಿವ ಸ್ಥಾನ ಕಳೆದುಕೊಂಡು ಸತತ ಒಂದು ವಾರದ ಕಾಲ ಪ್ರಯತ್ನ ನಡೆಸಿದರೂ ರಮೇಶ್ ಜಾರಕಿಹೊಳಿಗೆ ಮ್ಯಾಜಿಕ್ ನಂಬರ್ ಎಂದೆನಿಸಿರುವ 15 ಶಾಸಕರನ್ನು ಬಿಜೆಪಿ ಕ್ಯಾಂಪ್ ಗೆ ಕರೆ ತರಲು ವಿಫಲರಾಗಿದ್ದಾರೆ. ಹೀಗಾಗಿ ಅವರು ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದಿಂದ ಹಿಂದೆ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರದವರೆಗೂ ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ, ಬುಧವಾರ ಗೋಕಾಕ್ ಗೆ ಆಗಮಿಸಿದ ರಮೇಶ್ ಕೆಲ ಕಾಲ ಮನೆಯಲ್ಲಿದ್ದರು ನಂತರ ಮಧ್ಯಾಹ್ನ ಬೆಂಗಳೂರಿಗೆ ತೆರಳಿದರು.ಕುತೂಹಲವೆಂದರೇ ಅವರ ಸಹೋದರು ಸತೀಶ್ ಜಾರಕಿಹೊಳಿ ಕೂಡ ಪ್ರತ್ಯೇಕವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ, ಇಬ್ಬರು ಸಹೋದರರು ಡಾ. ಪರಮೇಶ್ವರ್ ಸೇರಿದಂತೆ ಕೆಪಿಸಿಸಿ ನಾಯಕರನ್ನು ಭೇಟಿ ಮಾಡಲಿದ್ದಾರೆ. ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಪಡಿಸಿರುವ ಸತೀಶ್ ಜಾರಕಿಹೊಳಿ ಗುರುವಾರ ರಮೇಶ್ ಜೊತೆಯಾಗಲಿದ್ದಾರೆ,ನಂತರ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ.

About the author

ಕನ್ನಡ ಟುಡೆ

Leave a Comment