ರಾಷ್ಟ್ರ

ಸಿಜೆಐ ವಿರುದ್ಧ ವಿಪಕ್ಷಗಳು ಸಲ್ಲಿಸಿದ್ದ ವಾಗ್ದಂಡನೆ ತಿರಸ್ಕರಿಸಿದ ಎಂ. ವೆಂಕಯ್ಯನಾಯ್ಡು

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ವಿಪಕ್ಷಗಳು ಸಲ್ಲಿಕೆ ಮಾಡಿದ್ದ ಮಹಾಭಿಯೋಗ ನಿಲುವಳಿ ಸೂಚನೆಯನ್ನು ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯನಾಯ್ಡು ಅವರು ತಿರಸ್ಕರಿಸಿದ್ದಾರೆ.ನ್ಯಾಯಾಧೀಶ ಲೋಯಾ ಸಾವಿನ ಬಗ್ಗೆ ಹೆಚ್ಚುವರಿ ತನಿಖೆಯ ಅಗತ್ಯವಿಲ್ಲ ಎಂದು ನ್ಯಾ.ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಆದೇಶ ನೀಡಿದ ಬೆನ್ನಲ್ಲೇ 7 ಪ್ರತಿಪಕ್ಷಗಳ ರಾಜ್ಯಸಭೆಯ 71 ಸದಸ್ಯರು ಸಹಿ ಹಾಕಿ ಮಹಾಭಿಯೋಗಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ನೋಟಿಸ್ ನೀಡಿದ್ದರು.ಆದರೆ ಕಾಂಗ್ರೆಸ್ ನೇತೃತ್ವದಲ್ಲಿ ಸಲ್ಲಿಸಿದ್ದ ಮಹಾಭಿಯೋಗ ನಿಲುವಳಿ ಸೂಚನೆಗೆ ಪಕ್ಷದ ಪ್ರಮುಖ ನಾಯಕರೇ ವಿರೋಧ ವ್ಯಕ್ತಪಡಿಸಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಜ್ಯಸಭಾ ಸದಸ್ಯರಾದ ಪಿ.ಚಿದಂಬರಂ, ಅಭಿಷೇಕ್ ಮನು ಸಿಂಗ್ವಿ, ಸಲ್ಮಾನ್ ಖುರ್ಷಿದ್ ನೋಟಿಸ್‌ಗೆ ಸಹಿ ಹಾಕಿರಲಿಲ್ಲ.ಹೈದರಾಬಾದ್ ಪ್ರವಾಸವನ್ನು ಮೊಟಕುಗೊಳಿಸಿ, ರಾಜಧಾನಿಗೆ ಹಿಂದಿರುಗಿರುವ ನಾಯ್ಡು ಅವರು, ಕಾನೂನು ತಜ್ಞರು ಮತ್ತು ಸಂಸದೀಯ ವ್ಯವಹಾರಗಳಲ್ಲಿ ಅನುಭವ ಹೊಂದಿರುವವರ ಸಲಹೆ ಹಾಗೂ ಸೂಚನೆಗಳನ್ನು ಪಡೆದು ಮಹಾಭಿಯೋಗ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ .

About the author

ಕನ್ನಡ ಟುಡೆ

Leave a Comment