ಕ್ರೀಡೆ

ಸಿಡ್ನಿ: ಆಸಿಸ್ ವಿರುದ್ಧದ 4ನೇ ಟೆಸ್ಟ್ ಗೆ ತಂಡ ಪ್ರಕಟ, ಕರ್ನಾಟದ ಕೆಎಲ್ ರಾಹುಲ್ ಗೆ ಅದೃಷ್ಟ

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಹಾಗೂ 4ನೇ ಟೆಸ್ಟ್ ಪಂದ್ಯಕ್ಕಾಗಿ 13 ಮಂದಿಯ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಸತತ ವೈಫಲ್ಯದ ಹೊರತಾಗಿಯೂ ಕನ್ನಡಿಗ ಕೆಎಲ್ ರಾಹುಲ್ ಕೊನೆಯ ಛಾನ್ಸ್ ಪಡೆದಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ನೇತೃತ್ವದ 13 ಮಂದಿಯ ತಂಡವನ್ನು ಆಯ್ಕೆ ಸಮಿತಿ ಪ್ರಕಟಿಸಿದ್ದು, ನಿರೀಕ್ಷೆಯಂತೆಯೇ ಶಮಿ, ಜಸ್ ಪ್ರೀತ್ ಬುಮ್ರಾ, ಉಮೇಶ್ ಯಾದವ್ ತಂಡದಲ್ಲಿದ್ದಾರೆ. 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಭಾರತ ತಂಡ 2-1ರಲ್ಲಿ ಮುನ್ನಡೆ ಸಾಧಿಸಿದ್ದು, ಸರಣಿ ಮೇಲೆ ಹಿಡಿತ ಸಾಧಿಸಿದೆ. ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೇವಲ ಡ್ರಾ ಸಾಧಿಸಿದರೂ ಭಾರತ ತಂಡ ಸರಣಿ ಜಯಿಸಲಿದೆ.

 

ಕನ್ನಡಿಗ ಕೆಎಲ್ ರಾಹುಲ್ ಗೆ ಖುಲಾಯಿಸಿದ ಅದೃಷ್ಟ: ಇನ್ನು ಸತತ ವೈಫಲ್ಯದ ಬಳಿಕ ತಂಡದಿಂದ ಹೊರಗುಳಿದಿದ್ದ ಕನ್ನಡಿಗ ಕೆಎಲ್ ರಾಹುಲ್ ಗೆ ಅದೃಷ್ಟ ಖುಲಾಯಿಸಿದೆ. ರೋಹಿತ್ ಶರ್ಮಾ ಪುತ್ರಿಯ ಮುಖಾಂತರ ರಾಹುಲ್ ಗೆ ಅದೃಷ್ಟ ಒಲಿದು ಬಂದಿದೆ. ಹೌದು.. ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿರುವುದರಿಂದ ರೋಹಿತ್ ತಮ್ಮ ಮಗುವನ್ನು ನೋಡಲು ಮುಂಬೈಗೆ ತೆರಳಿದ್ದಾರೆ. ಹೀಗಾಗಿ ಅವರಿಂದ ತೆರವಾದ ಸ್ಥಾನಕ್ಕೆ ಕೆಎಲ್ ರಾಹುಲ್ ರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಇದು ರಾಹುಲ್ ಗೆ ಕೊನೆಯ ಛಾನ್ಸ್ ಆಗಿದ್ದು, ಇಲ್ಲಿಯೂ ರಾಹುಲ್ ವಿಫಲರಾಜದರೆ ತಂಡದಿಂದ ಗೇಟ್ ಪಾಸ್ ಖಂಡಿತಾ..
ಅಶ್ವಿನ್ ಭವಿಷ್ಯ ನಾಳೆ ನಿರ್ಧಾರ: ಇನ್ನು ತಂಡದ ಸ್ಟಾರ್ ಸ್ಪಿನ್ನರ್ ಆರ್ ಅಶ್ವಿನ್ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಪಂದ್ಯದ ಹೊತ್ತಿಗೆ ಅವರು ಗುಣಮುಖರಾಗುವ ಸಾಧ್ಯತೆ ಇದೆ. ಆದರೂ ನಾಳೆ ನಡೆಯುವ ಫಿಟ್ನೆಸ್ ಪರೀಕ್ಷೆಯಲ್ಲಿ ಅಶ್ವಿನ್ ಪಾಸ್ ಆದರೆ ಮಾತ್ರ ಸಿಡ್ನಿ ಟೆಸ್ಟ್ ಗೆ ಆಯ್ಕೆಯಾಗಲಿದ್ದಾರೆ.

About the author

ಕನ್ನಡ ಟುಡೆ

Leave a Comment