ರಾಜಕೀಯ

ಸಿದ್ದರಾಮಯ್ಯರನ್ನು ಸೋಲಿಸುವುದೇ ನನ್ನ ಗುರಿ ಎಂದು ಮತ್ತೊಮ್ಮೆ ಗುಡುಗಿದ ಶ್ರೀನಿವಾಸ ಪ್ರಸಾದ್​

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ನನ್ನ ಗುರಿ ಎಂದು ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ ಎಂದು ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್​ ಮತ್ತೊಮ್ಮೆ ಗುಡುಗಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ ಅವರು, ಸೋಲಿಸೋದು ನನ್ನ ಗುರಿ. ಅದು ಹೇಗೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ. ನಾವು ಅಭ್ಯರ್ಥಿ ಹಾಕಲೇ ಬೇಕಾಗುತ್ತೆ‌. ಅಭ್ಯರ್ಥಿ ಹಾಕುತ್ತೇವೆ. ಆದರೆ, ಯಾರು ಗೆಲ್ಲುತ್ತಾರೆ ಎಂದು ಈಗ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯ ಅವರ ವಿರುದ್ಧ ತಮ್ಮ ತಂತ್ರಗಾರಿಕೆಯನ್ನು ಗುಟ್ಟಾಗಿಯೇ ಉಳಿಸಿದರು.

ಸಿದ್ದರಾಮಯ್ಯ ರೆಸಾರ್ಟ್​ನಲ್ಲಿ ಕುಳಿತು ಏನೇನ್ ಮಾಡಿದರು ಎಂದು ನನಗೆ ಗೊತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯರನ್ನು ಲಕ್ಷಾಂತರ ರೂಪಾಯಿ ನೀಡಿ ಖರೀದಿ ಮಾಡಿದ್ದಾರೆ. ಹಣ ಹಂಚುವುದು ಚುನಾವಣೆಯ ಒಂದು ಭಾಗವೇ ಹೊರತು ಹಣದಿಂದಲೇ ಚುನಾವಣೆ ಗೆಲ್ಲಲ್ಲು ಸಾಧ್ಯವಿಲ್ಲ ಎಂದೂ ಹೇಳಿದರು.

About the author

ಕನ್ನಡ ಟುಡೆ

Leave a Comment