ರಾಜಕೀಯ

ಸಿದ್ದರಾಮಯ್ಯ ಕಲಿಯುಗದ ಕೃಷ್ಣನಂತೆ, ಬಿಎಸ್‌ವೈ ಶಕುನಿಯಂತೆ; ವರ್ತೂರು ಪ್ರಕಾಶ್

ರಾಯಚೂರು:ನಗರದಲ್ಲಿ ಮಾತನಾಡಿದ ವರ್ತೂರು ಪ್ರಕಾಶ್ ಅವರು, ಸಿದ್ದರಾಮಯ್ಯ ಕಲಿಯುಗದ ಕೃಷ್ಣ ಇದ್ದಂತೆ, ಬಿಎಸ್‌ವೈ ಕಲಿಯುಗದ ಶಕುನಿ ಇದ್ದಂತೆ ಎಂದು ವರ್ತೂರ್ ಬಿಎಸ್‌ವೈ ರವರನ್ನ ಟೀಕಿಸಿದ್ದಾರೆ.

ಬಿಎಸ್‌ವೈಯಿಂದಲೇ ಬಿಜೆಪಿ ಪಕ್ಷ ಹಾಳಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಎಲ್ಲೆ ಸ್ಪರ್ಧೆ ಮಾಡಿದ್ರು, ಅವರ ವಿರುದ್ಧ ಕಾಂಗ್ರೆಸ್‌‌ ಸ್ಪರ್ಧಿಸಲು ಸಿದ್ಧ ಎಂದು ಸವಾಲ್‌ ಎಸೆದಿದ್ದಾರೆ.

ಮುಂಬರುವ ದಿನಗಳಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇನೆ, 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿಯ ಮಿಷನ್ 150 ಠುಸ್ ಆಗಲಿದೆ ಎಂದರು ವರ್ತೂರು ಪ್ರಕಾಶ್.

About the author

ಕನ್ನಡ ಟುಡೆ

Leave a Comment