ರಾಜ್ಯ ಸುದ್ದಿ

ಸಿದ್ದರಾಮಯ್ಯ ಬ್ರಹ್ಮಾಸ್ತ್ರಕ್ಕೆ ಬೆಚ್ಚಿಬಿದ್ದ ರೆಬೆಲ್ ಶಾಸಕರು, ಶಾಸಕಾಂಗ ಸಭೆಗೆ ಹಾಜರಿ ಸಾಧ್ಯತೆ

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಭಾರೀ ತಲೆನೋವಾಗಿ ಪರಿಣಮಿಸಿರುವ ಕಾಂಗ್ರೆಸ್​ ಅತೃಪ್ತ ಶಾಸಕರು ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೂಡಿದ ಬ್ರಹ್ಮಾಸ್ತ್ರಕ್ಕೆ ಬೆಚ್ಚಿಬಿದ್ದಿದ್ದಾರೆ.
ಇಂದು ಬಜೆಟ್​ ಮಂಡನೆಯಾಗಲಿದ್ದು, ಬಜೆಟ್​ ಮಂಡನೆಗೂ ಮುನ್ನ 9 ಗಂಟೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್​ ಶಾಸಕಾಂಗ ಪಕ್ಷದ ವಿಶೇಷ ಸಭೆಯನ್ನು ಕರೆಯಲಾಗಿದೆ. ಈ ಸಭೆಗೆ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು. ಯಾರೇ ತಪ್ಪಿಸಿಕೊಂಡರೆ, ಅವರಯ ಸ್ವ-ಇಚ್ಛೆಯಿಂಂದ ಕಾಂಗ್ರೆಸ್​ ಪ್ರಾಥಮಿಕ ಸದಸ್ಯತ್ವದಿಂದ ಬಿಟ್ಟುಬಿಡಲು ಇಚ್ಛಿಸಿದ್ದಾರೆ ಎಂದು ಪರಿಣಗಣಿಸಿ, ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಭಾರತೀಯ ದಂಡಸಂಹಿಯತೆ ಅನುಚ್ಛೇದ 10ರ (ಆ್ಯಂಟಿ ಡಿಫೆನ್ಸ್​ ಲಾ) ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ಪತ್ರಮುಖೇನ ಎಲ್ಲ ಶಾಸಕರಿಗೆ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ಹೂಡಿರುವ ಈ ಆ್ಯಂಟಿ ಡಿಫೆನ್ಸ್​ ಲಾ ಬ್ರಹ್ಮಾಸ್ತ್ರದಿಂದ ಕಕ್ಕಾಬಿಕ್ಕಿಯಾಗಿರುವ ಅತೃಪ್ತ ಶಾಸಕರು ಇಂದು ನಡೆಯುವ ಸಿಎಲ್ ಪಿ ಸಭೆಗೆ ಹಾಜರಾಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಅವರ ಮಾಸ್ಟರ್ ಪ್ಲಾನ್​ನಿಂದಾಗಿ ಹಲವು ದಿನಗಳಿಂದ ಮುಂಬೈನಲ್ಲಿ ಬೀಡುಬಿಟ್ಟಿದ್ದ ಕಾಂಗ್ರೆಸ್​ ಶಾಸಕರು ಮುಂಬೈ ಹೋಟೆಲ್ ನ 10 ಲಕ್ಷ ಬಿಲ್​ ಕಟ್ಟಿ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ. ಅಂತೆಯೇ ಸಿಎಲ್​ಪಿ ಸಭೆಗೆ ಅತೃಪ್ತ ಶಾಸಕರು ಹಾಜರಾದರೆ ಅವರನ್ನು ಮನವೊಲಿಸಿ, ಪಕ್ಷ ಬಿಟ್ಟು ಹೋಗದಂತೆ ತಡೆಯಬಹುದು. ಇದು ವರ್ಕೌಟ್​ ಆದರೆ, ಇಷ್ಟು ದಿನದವರೆಗೂ ಕೇಳಿಬರುತ್ತಿದ್ದ ಆಪರೇಷನ್​ ಕಮಲ ಕೂಗು ಸದ್ದಡಗಲಿದೆ ಎಂಬುದು ಕಾಂಗ್ರೆಸ್ ನಾಯಕರ ಅಭಿಮತವಾಗಿದೆ.

About the author

ಕನ್ನಡ ಟುಡೆ

Leave a Comment