ರಾಜ್ಯ ಸುದ್ದಿ

ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಚೇತರಿಕೆ

ತುಮಕೂರು: ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ಕುರಿತು ಸಿದ್ಧಗಂಗಾ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಶ್ರೀಗಳ ಆರೋಗ್ಯ ಚೇತರಿಕೆ ಕಂಡಿದ್ದು, ಬಿಪಿ, ಪಲ್ಸ್ ಎಲ್ಲವೂ ಸ್ಥಿರವಾಗಿದೆ. ಪ್ರೋಟೀನ್ ಅಂಶ 3.2 ಮಿ.ಗ್ರಾಂಗೆ ಏರಿಕೆಯಾಗಿದೆ. ಪ್ಲಾಸ್ಮಾ ಅಲ್ಟ್ರಾ ಫಿಲ್ಟರ್ ಮೂಲಕ ರಕ್ತ ಶುದ್ದೀಕರಣ ಮಾಡಲಾಗಿತ್ತು. ಮೊನ್ನೆ ರಕ್ತ ಶುದ್ಧೀಕರಣ ಮಾಡಿದಾಗಿನಿಂದಲೂ ಶ್ರೀಗಳ ಆರೋಗ್ಯದಲ್ಲಿ ಗಣನೀಯ ಚೇತರಿಕೆಯಾಗಿದೆ. ಎಂದಿನಂತೆ ದ್ರವಾಹಾರ ಸ್ವೀಕರಿಸಿದ್ದಾರೆ ಎಂದು ತಿಳಿಸಲಾಗಿದೆ.

ಆಸ್ಪತ್ರೆಯ ವೈದ್ಯ ಡಾ. ಪರಮೇಶ್‌ ಮಾತನಾಡಿ, ಶ್ರೀಗಳು ಮಾತಾಡುತ್ತಿದ್ದು, ಅವರು ಕಣ್ಣು ಬಿಟ್ಟು ನೋಡುತ್ತಿದ್ದಾರೆ‌‌‌. ಇನ್ನು ಚಿಕಿತ್ಸೆ ನೀಡಬೇಕಾಗುತ್ತದೆ. ಶ್ರೀಗಳು ಗುಣಮುಖರಾಗಲು ಬಹಳಷ್ಟು ಸಮಯಬೇಕು. ಶ್ರೀಗಳಿಗೆ ಸಾದ್ಯವಾದಷ್ಟು ಚಿಕಿತ್ಸೆ ನೀಡುತ್ತಿದ್ದು, ಚಿಕಿತ್ಸೆ ಫಲಕಾರಿಯಾಗುವ ವಿಶ್ವಾಸವಿದೆ. ಸೋಂಕು ಕೂಡ ಕಡಿಮೆಯಾಗಿದೆ. ನಿನ್ನೆ‌ ಸಂಜೆ ವೇಳೆಗೆ ಬಹಳಷ್ಟು ಚೇತರಿಕೆ‌ ಕಂಡಿದ್ದಾರೆ. ಪ್ರೊಟೀನ್ ಅಂಶ ಕೂಡ‌ ಜಾಸ್ತಿಯಾಗಿದೆ ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment