ರಾಜ್ಯ ಸುದ್ದಿ

ಸಿದ್ಧಗಂಗಾ ಶ್ರೀ ಲವಲವಿಕೆ ವೈದ್ಯ ಲೋಕಕ್ಕೇ ಅಚ್ಚರಿ

ತುಮಕೂರು: ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರು ನಿರೀಕ್ಷೆಗೂ ಮೀರಿ ಔಷಾಧೋಪಚಾರಕ್ಕೆ ಸ್ಪಂದಿಸುತ್ತಿದ್ದಾರೆ. ಇಳಿ ವಯಸ್ಸಿನಲ್ಲಿ ಬೈಪಸ್‌ ಸರ್ಜರಿಗೆ ಒಳಗಾಗಿದ್ದರೂ, ಸ್ವಾಮೀಜಿಯವರ ಲವಲವಿಕೆ ಕಂಡು ಅಲ್ಲಿಯ ತಜ್ಞ ವೈದ್ಯರೇ ಅಚ್ಚರಿಗೊಳಗಾಗಿದ್ದಾರೆ.

ಇದು ತಮ್ಮ ಜೀವನದ ಅತೀ ಸ್ಮರಣೀಯ ಶಸ್ತ್ರ ಚಿಕಿತ್ಸೆ ಎಂದು ಬಣ್ಣಿಸಿರುವ ರೇಲಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಮಹಮ್ಮದ್‌ ಅವರು, ಶ್ರೀಗಳಿಗೆ ನೀಡಿದ ಚಿಕಿತ್ಸೆಯ ನೆನಪುಗಳನ್ನು ಕೃತಿ ರೂಪದಲ್ಲಿ ಹೊರತರುವುದಾಗಿ ಹೇಳಿಕೊಂಡಿದ್ದಾರೆ. ಈ ನಡುವೆ, ಶನಿವಾರ ರಾತ್ರಿ ತಮ್ಮನ್ನು ಭೇಟಿಯಾದ ಸಚಿವ ಡಿ ಕೆ ಶಿವಕುಮಾರ್‌ ಜತೆ ಸ್ವಾಮೀಜಿಯವರು ಚುರುಕಾಗಿ ಮಾತನಾಡಿದ್ದಾರೆ. ಹಾಸಿಗೆಯಿಂದ ಎದ್ದು ಕೂರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇನ್ನೊಂದು ದಿನ ಹಾಸಿಗೆಯಲ್ಲೇ ಮಲಗಿ ವಿಶ್ರಾಂತಿ ಪಡೆಯುವಂತೆ ಸಚಿವರು ಮನವಿ ಮಾಡಿದಾಗ ಸುಮ್ಮನಾಗಿದ್ದಾರೆ.

ಚೆನ್ನೈಗೆ ಬರದಂತೆ ಮನವಿ:
ಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಶ್ರೀಗಳಿಗೆ ಸೋಂಕು ತಗಲುವ ಸಂಭವವಿರುವುದರಿಂದ ಭಕ್ತರು, ರಾಜಕೀಯ ನಾಯಕರು ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯಕ್ಕೆ ತೊಂದರೆ ಮಾಡಬಾರದು ಎಂದು ಡಾ. ಮಹಮ್ಮದ್‌ ಹಾಗೂ ಸಿದ್ಧಗಂಗಾ ಮಠದ ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮನವಿ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment