ರಾಷ್ಟ್ರ ಸುದ್ದಿ

ಸಿದ್ಧಗಂಗಾ ಶ್ರೀಗಳು ಡಿಸ್ಚಾರ್ಜ್‌: ಇದೊಂದು ಪವಾಡ ಎಂದ ಡಾ.ರೇಲಾ

ಚೆನ್ನೈ: ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಸಿದ್ದಗಂಗಾ ಮಠದ ಶತಾಯುಷಿ ಶ್ರೀಗಳಾದ ಡಾ.ಶಿವಕುಮಾರ ಸ್ವಾಮಿಜಿ ಅವರು ಮಂಗಳವಾರ ಚೆನ್ನೈನ ರೇಲಾ ಇನ್ಸ್ ಟಿಟ್ಯೂಟ್ ಮೆಡಿಕಲ್ ಸೆಂಟರ್ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಮಠಕ್ಕೆ ಮರಳುತ್ತಿದ್ದಾರೆ.

ಚೆನ್ನೈನಿಂದ ವಿಶೇಷ ಏರ್‌ ಅಂಬುಲೆನ್ಸ್‌ನಲ್ಲಿ ಎಚ್‌ಎಎಲ್‌ ವಿಮಾನಕ್ಕೆ ಕರೆತಂದು ಝಿರೋ ಟ್ರಾಫಿಕ್‌ ವ್ಯವಸ್ಥೆಯಲ್ಲಿ ಮಠಕ್ಕೆ ಕರೆದೊಯ್ಯಲಾಗುತ್ತಿದೆ.

ಇದೊಂದು ಪವಾಡ: ಡಾ.ಮೊಹಮ್ಮದ್ ರೇಲಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ‘ಸಿದ್ದಗಂಗಾ ಶ್ರೀಗಳು ಕ್ಷೇಮವಾಗಿ ಮರಳುತ್ತಿರುವುದು ಪವಾಡ. ಇದು ಯಾವುದೇ ರೆಕಾರ್ಡ್‌ ಅಲ್ಲ, ಖುಷಿಯ ವಿಚಾರ ಅಷ್ಟೇ’ ಎಂದರು.

ಡಿಸೆಂಬರ್‌ 7 ರಂದು ಶ್ರೀಗಳನ್ನು ವಿಶೇಷ ಏರ್‌ ಅಂಬುಲೆನ್ಸ್‌ ಮೂಲಕ ಚೆನ್ನೈಗೆ ಕರೆದೊಯ್ದು ಚಿಕಿತ್ಸೆ ಆರಂಭಿಸಲಾಗಿತ್ತು. ಖ್ಯಾತ ವೈದ್ಯ  ಡಾ.ಮೊಹಮ್ಮದ್ ರೇಲಾ ಅವರು ವಿಶೇಷ ಮುತುವರ್ಜಿ ವಹಿಸಿ ಶಸ್ತ್ರ ಚಿಕಿತ್ಸೆ ನಡೆಸಿ ಚಿಕಿತ್ಸೆ ನೀಡಿದ್ದರು. ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಶ್ರೀಗಳಿಗೆ ಇನ್ನೂ 15 ರಿಂದ 20 ದಿನಗಳ ಕಾಲ ಹೆಚ್ಚಿನ ವಿಶ್ರಾಂತಿ ನೀಡಬೇಕಾಗಿದೆ.

ಮಠದಲ್ಲಿ ದರ್ಶನವಿಲ್ಲ: ಮಠಕ್ಕೆ ಭಕ್ತರು ಬಂದರೂ ಶ್ರೀಗಳ ದರ್ಶನಕ್ಕೆ ಅವಕಾಶ ನೀಡಲು ಕಷ್ಟವಾಗುತ್ತದೆ ಎಂದು ಕಿರಿಯ ಶ್ರೀಗಳು ಹೇಳಿದ್ದಾರೆ. 10 ರಿಂದ 20 ದಿನಗಳ ಕಾಲ ಶ್ರೀಗಳಿಗೆ ಸಂಪೂರ್ಣ ವಿಶ್ರಾಂತಿ ಬೇಕಾಗಿರುವ ಕಾರಣ ಅವರ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

 

About the author

ಕನ್ನಡ ಟುಡೆ

Leave a Comment