ರಾಷ್ಟ್ರ ಸುದ್ದಿ

ಸಿಧು ಅವರಿಗೆ ಭಾರತಕ್ಕಿಂತ ಹೆಚ್ಚಿನ ಗೌರವ ಪ್ರೀತಿ ಪಾಕಿಸ್ತಾನದ ಮೇಲಿದೆ: ಹರ್ಸಿಮತ್ ಕೌರ್

ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ನವ್ ಜೊತ್ ಸಿಂಗ್ ಸಿಧು ಅವರಿಗೆ ಭಾರತಕ್ಕಿಂತ ಹೆಚ್ಚಿನ ಗೌರವ ಮತ್ತು ಪ್ರೀತಿ ಪಾಕಿಸ್ತಾನದ ಮೇಲಿದೆ ಎಂದು ಶಿರೋಮಣಿ ಅಕಾಲಿಕ ದಳ ಮುಖಂಡೆ ಹಾಗೂ ನಾಯಕಿ ಹರ್ಸಿಮತ್ ಕೌರ್ ಬಾದಲ್ ಹೇಳಿದ್ದಾರೆ.
ಬುಧವಾರ  ಪಾಕಿಸ್ತಾನದಲ್ಲಿ ನಡೆದ  ಕತಾರ್ ಪುರ ಕಾರಿಡಾರ್ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಭಾರತಕ್ಕೆ ವಾಪಾಸಾಗುವ ವೇಳೆ ವಾಘಾ ಗಡಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು ಈ ವೇಳೆ ಪಾಕಿಸ್ತಾನ ಪಿಎಂ ಜೊತೆ  ಸಿಧು ಅವರ ಸ್ನೇಹ ಹೇಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಅವರಿಗೆ  ಮುಂದಿನ ಪಾಕಿಸ್ತಾನ ಚುನಾವಣೆಯಲ್ಲಿ ಟಿಕೆಟ್ ನೀಡುತ್ತಾರೆ ಎಂದು ನನಗೆ ಅನ್ನಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ. ಏಕೆಂದರೇ ಭಾರತಕ್ಕಿಂತ ಹೆಚ್ಚಾಗಿ ಸಿಧು ಅವರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಹಾಗೂ ಗೌರವವಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment