ರಾಷ್ಟ್ರ

ಸಿಬಿಎಸ್ಇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: 12ನೇ ತರಗತಿ ಮತ್ತೆರಡು ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿತ್ತು- ಅಧಿಕಾರಿಗಳು

ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್’ಸಿ)ಯ 10ನೇ ತರಗತಿ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ಪರೀಕ್ಷೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾದ ಪ್ರಕರಣದ ಬೆನ್ನಲ್ಲೇ 12ನೇ ತರಗತಿಯ ಮತ್ತೆರಡು ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುವ ಸಾಧ್ಯತೆಗಳಿತ್ತು ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
12ನೇ ತರಗತಿಯ ಜೀವಶಾಸ್ತ್ರ ಹಾಗೂ ಅಕೌಂಟನ್ಸಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುವ ಸಂಭವವಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಆರಂಭದಲ್ಲಿ ಇದನ್ನು ಸಿಬಿಎಸ್ಇ ಒಪ್ಪಿಕೊಂಡಿರಲಿಲ್ಲ. ನಂತರ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಹೇಳಿತ್ತು. ಇದೀಗ ಮತ್ತೊಂದು ಸತ್ಯ ಬಹಿರಂಗಗೊಂಡಿದೆ. ಮಾರ್ಚ್.15ರಂದು ಜೀವಶಾಸ್ತ್ರ ಪರೀಕ್ಷೆ ನಡೆದಿದ್ದು, ಮಾರ್ಚ್ 27 ರಂದು ಅಕೌಂಟನ್ಸಿ ಪರೀಕ್ಷೆಯನ್ನು ನಡೆಸಲಾಗಿದೆ. ಆದರೆ, ಈ ಪ್ರಶ್ನೆಪತ್ರಿಕೆಗಳೂ ಕೂಡ ಸೋರಿಕೆಯಾಗುವ ಸಾಧ್ಯತೆಗಳಿತ್ತು ಎಂದು ವರದಿಗಳು ತಿಳಿಸಿವೆ.

ಈ ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆಯಾದ ವರದಿಯನ್ನು ಸಿಬಿಎಸ್ಇ ಮತ್ತು ಸಚಿವಾಲಯ ತಿರಸ್ಕರಿಸಿತ್ತು. ಅಲ್ಲದೆ, ಇತರೆ ಎರಡು ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದೆ ಎಂಬ ವರದಿಗಳು ಬಂದಿದ್ದರೂ ಕೂಡ ಕೇವಲ ಆರ್ಥಶಾಸ್ತ್ರ ಪರೀಕ್ಷೆಯನ್ನು ಮಾತ್ರ ಸಿಬಿಎಸ್ಇ ರದ್ದು ಮಾಡಿತ್ತು. ಇದಕ್ಕೆ ಯಾವುದೇ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ.

About the author

ಕನ್ನಡ ಟುಡೆ

Leave a Comment