ರಾಷ್ಟ್ರ ಸುದ್ದಿ

ಸಿಬಿಐ ಕಚೇರಿ ಮುಂಭಾಗ ಪ್ರತಿಭಟಿಸುತ್ತಿದ್ದ ರಾಹುಲ್​ ಗಾಂಧಿ ಬಂಧನ,ಬಿಡುಗಡೆ

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್​ ಕುಮಾರ್​ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವುದನ್ನು ವಿರೋಧಿಸಿ ದೆಹಲಿಯ ಸಿಬಿಐ ಮುಖ್ಯಕಚೇರಿಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಮತ್ತು ಇತರೆ ನಾಯಕರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.

ಶುಕ್ರವಾರ ಬೆಳಗ್ಗೆ ದೆಹಲಿಯ ಸಿಬಿಐ ಮುಖ್ಯ ಕಚೇರಿ ಮತ್ತು ದೇಶಾದ್ಯಂತ ಇರುವ ಸಿಬಿಐ ಕಚೇರಿಗಳ ಮುಂಭಾಗ ಕಾಂಗ್ರೆಸ್​ ನೇತೃತ್ವದಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು. ರಾಹುಲ್​ ಗಾಂಧಿ ಅವರೊಂದಿಗೆ ಕಾಂಗ್ರೆಸ್​ ಹಿರಿಯ ನಾಯಕರಾದ ಅಶೋಕ್​ ಗೆಹ್ಲೋಟ್​, ಅಹಮದ್​ ಪಟೇಲ್​, ಮೋತಿಲಾಲ್​ ವೋರಾ, ವೀರಪ್ಪ ಮೋಯ್ಲಿ, ಆನಂದ್​ ಶರ್ಮಾ, ಲೋಕತಾಂತ್ರಿಕ ಜನತಾ ದಳದ ನಾಯಕ ಶರದ್​ ಯಾದವ್​, ಸಿಪಿಐ ನಾಯಕ ಡಿ. ರಾಜಾ ಮತ್ತು ತೃಣಮೂಲ ಕಾಂಗ್ರೆಸ್​ನ ನಾಯಕ ನದೀಮುಲ್​ ಹಕ್​ ಪ್ರತಿಭಟನೆ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್​ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಜತೆಗೆ ಸಿಬಿಐ, ಚುನಾವಣಾ ಆಯೋಗ ಮತ್ತು ಜಾರಿ ನಿರ್ದೇಶನಾಲಯದಲ್ಲಿ ಪ್ರಧಾನಿ ಮೋದಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

About the author

ಕನ್ನಡ ಟುಡೆ

Leave a Comment