ರಾಷ್ಟ್ರ ಸುದ್ದಿ

ಸಿಬಿಐ ಮುಖ್ಯಸ್ಥರ ಆಯ್ಕೆ ಸಂಬಂಧ ಗುರುವಾರ ಪ್ರಧಾನಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಭೆ

ನವದೆಹಲಿ: ಸಿಬಿಐ ಮುಖ್ಯಸ್ಥರ ನೇಮಕ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿನ ಉನ್ನತ ಮಟ್ಟದ ಸಮಿತಿ ಸಭೆ ಗುರುವಾರ ನಡೆಯಲಿದ್ದು, ಖಾಲಿ ಇರುವ ಹುದ್ದೆಗೆ ಯಾರನ್ನು ನೇಮಕ ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಸಲಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಅಥವಾ ಅವರ ನಾಮನಿರ್ದೇಶಿತರು ಮತ್ತು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಭೆಯಲ್ಲಿ 1982ರ ಬ್ಯಾಚಿನ ಹಿರಿಯ ಅಧಿಕಾರಿಗಳಾಗಿರುವ   ಜೆಕೆ ಶರ್ಮಾ ಮತ್ತು ಪರ್ಮೀಂದರ್ ರೈ  ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ. ಆದರೆ, ಸಿಬಿಐನಲ್ಲಿ ಅನುಭವದ ಕೊರತೆ ಇದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಗೃಹ ಸಚಿವಾಲಯ (ಅಂತರಿಕ ಭದ್ರತಾ ವಿಭಾಗದ ) ವಿಶೇಷ ಕಾರ್ಯದರ್ಶಿ   ರಿನಾ ಮಿತ್ರಾ ಹೆಸರೂ ಕೂಡಾ ಕೇಳಿಬರುತ್ತಿದೆ. ಸಿಬಿಐನಲ್ಲಿ ಅವರು ಐದು ವರ್ಷ ಸೇವೆ ಸಲ್ಲಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಹೆಚ್ಚಿನ ಅವಧಿ ಅಧಿಕಾರ ನಡೆಸಿದ್ದು, ಗಂಭೀರ ಭ್ರಷ್ಟಾಚಾರ ಪ್ರಕರಣಗಳನ್ನು  ನಿರ್ವಹಿಸಿದ್ದಾರೆ.ಉತ್ತರ ಪ್ರದೇಶ ಕೇಡರ್ ನ 1984ರ ಬ್ಯಾಚಿನ ಜಾವೇದ್ ಅಹ್ಮದ್  ಸಿಬಿಐನಲ್ಲಿ 13 ವರ್ಷ ಸೇವೆ ಸಲ್ಲಿಸಿದ್ದಾರೆ. ರಾಜಸ್ತಾನದ ಮಾಜಿ ಡಿಜಿಪಿ  ಓ ಪಿ ಗಾಲ್ಹೋತ್ರಾ,  ಸಿಬಿಐನಲ್ಲಿ 11 ವರ್ಷ ಸೇವೆ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ಜನವರಿ 10 ರಂದು ವಜಾಗೊಳಿಸಿದ ನಂತರ ಖಾಲಿ ಹುದ್ಧೆ ಭರ್ತಿ ಮಾಡುವ ಸಂಬಂಧ ಆಯ್ಕೆ ಸಮಿತಿ ಗುರುವಾರ ಸಭೆ ನಡೆಸುತ್ತಿದೆ. 1979ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದ ವರ್ಮಾ ಹಾಗೂ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ನಡುವಿನ ಗಲಾಟೆ ಹಿನ್ನೆಲೆಯಲ್ಲಿ  ವರ್ಮಾ ಅವರನ್ನು ವಜಾಗೊಳಿಸಲಾಗಿತ್ತು.

About the author

ಕನ್ನಡ ಟುಡೆ

Leave a Comment