ಸುದ್ದಿ

ಸಿಲಿಂಡರ್ ಸ್ಫೋಟ 4 ಮಕ್ಕಳು ಸೇರಿ 9 ಮಂದಿಗೆ ಗಂಭೀರ ಗಾಯ

ಬೆಂಗಳೂರು : ಅಡುಗೆ ಅನಿಲ ಸಿಲಿಂಡರ್ ಸ್ಪೋಟಗೊಂಡು ನಾಲ್ಕು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನ ಪೀಣ್ಯ ಸಮೀಪದ ದಾಸರಹಳ್ಳಿಯಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ತುಮಕೂರು ಜಿಲ್ಲೆಯ ಪಾವಗಡ ಮೂಲದ ದೇವರಾಜು, ಲಕ್ಷ್ಮಮ್ಮ , ವೆಂಕಟೇಶ, ಮಹೇಶ್ವರಮ್ಮ, ಸೋಮಶೇಖರ, ಹೊನ್ನೂರಪ್ಪ, ನಿರಂಜನ್, ದೇವಿಕಾ, ಸಂಗೀತ ಎಂದು ತಿಳಿದುಬಂದಿದೆ. ರಾತ್ರಿ ಮಲಗುವ ಸಂದರ್ಭ ಗ್ಯಾಸ್ ಸಿಲಿಂಡರ್ ಆಫ್ ಮಾಡದೆ ಮಲಗಿದ್ದ ಕುಟುಂಬ ಈ ಸಂದರ್ಭ ಸಿಲಿಂಡರಿನಿಂದ ಗ್ಯಾಸ್ ಸೋರಿಕೆಯಾಗಿದೆ ಮುಂಜಾನೆ 4.30ಕ್ಕೆ ಎದ್ದು ಲೈಟ್ ಸ್ವಿಚ್ ಆನ್ ಮಾಡಿದಾಗ ಸಿಲಿಂಡರ್ ಸ್ಫೋಟಗೊಂಡಿದೆ, ಘಟನೆಯಲ್ಲಿ ನಾಲ್ವರು ಮಕ್ಕಳಿಗೆ ಗಂಭೀರ ಗಾಯವಾಗಿದ್ದು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲುಮಾಡಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author

ಕನ್ನಡ ಟುಡೆ

Leave a Comment