ರಾಜ್ಯ ಸುದ್ದಿ

ಸಿಲಿಕಾನ್​ ಸಿಟಿಯಲ್ಲಿ ಇಂದು ಸಂಜೆ ಧಾರಾಕಾರ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಇಂದು ಸಂಜೆ ಧಾರಾಕಾರ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ತಮಿಳುನಾಡಿನಲ್ಲಿ ಈಶಾನ್ಯ ಮಾರುತದಿಂದಾಗಿ ಭಾರಿ ಮಳೆಯಾಗುತ್ತಿದ್ದು, ರಾಮೇಶ್ವರಂ ಸೇರಿ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಇಂದು ಸಂಜೆ, ನಾಳೆ ಬೆಂಗಳೂರಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳ ಕೊಲ್ಲಿಯಿಂದ ಶ್ರೀಲಂಕಾದವರೆಗೂ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ, ದಕ್ಷಿಣ ಒಳನಾಡು, ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ ಸೇರಿ ಬೆಂಗಳೂರಿನಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. 

About the author

ಕನ್ನಡ ಟುಡೆ

Leave a Comment