ರಾಜ್ಯ ಸುದ್ದಿ

ಸಿ.ಕೆ.ಜಾಫರ್‌ ಷರೀಫ್‌ ನಿವಾಸಕ್ಕೆ ಪ್ರಣಬ್‌ ಮುಖರ್ಜಿ ಭೇಟಿ: ಕುಟುಂಬ ಸದಸ್ಯರಿಗೆ ಸಾಂತ್ವನ

ಬೆಂಗಳೂರು: ಇತ್ತೀಚೆಗೆ ನಿಧನರಾದ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್‌ ಷರೀಫ್‌ ಅವರ ನಿವಾಸಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಫ್ರೇಜರ್‌ಟೌನ್‌ನಲ್ಲಿರುವ ಷರೀಫ್‌ರ ನಿವಾಸಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್‌ ಅಹಮದ್‌ ಖಾನ್‌ ಹಾಗೂ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್‌ ಜತೆ ತೆರಳಿದ ಪ್ರಣಬ್‌ ಅವರು ಕುಟುಂಬ ಸದಸ್ಯರೊಂದಿಗೆ ಕೆಲಕಾಲ ಮಾತುಕತೆ ನಡೆಸಿ ಷರೀಫರ ಒಡನಾಟವನ್ನು ಸ್ಮರಿಸಿದರು.

About the author

ಕನ್ನಡ ಟುಡೆ

Leave a Comment