ರಾಷ್ಟ್ರ ಸುದ್ದಿ

ಸುಕ್ಮಾ: ಎನ್ ಕೌಂಟರ್ ನಲ್ಲಿ 8 ನಕ್ಸಲೀಯರ ಹತ್ಯೆ,ಇಬ್ಬರು ಪೊಲೀಸರು ಹುತಾತ್ಮ

ಸುಕ್ಮಾ: ಛತ್ತೀಸ್ ಗಡದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲೀಯರ ನಡುವೆ  ಇಂದು ನಡೆದ ಗುಂಡಿನ ಕಾಳಗದಲ್ಲಿ 8 ನಕ್ಸಲೀಯರು ಹತ್ಯೆಯಾಗಿದ್ದು, ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.ಭದ್ರತಾ ಪಡೆಗಳು ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ತೆಲಂಗಾಣ ಗಡಿ ಭಾಗ ಕಿಸ್ತಾರಾಮ್  ಅರಣ್ಯ ಪ್ರದೇಶಕ್ಕೆ ಹೋಗಿದ್ದಾಗ ಗುಂಡಿನ ಕಾಳಗ ನಡೆದಿದೆ ಎಂದು ಸುಕ್ಮಾ ಪೊಲೀಸ್ ಸೂಪರಿಟೆಂಡೆಂಟ್  ಅಭಿಷೇಖ್ ಮೀನಾ ಹೇಳಿದ್ದಾರೆ.ಎನ್ ಕೌಂಟರ್ ನಡೆದ ಪ್ರದೇಶದಲ್ಲಿ 8 ನಕ್ಸಲೀಯರ ಮೃತದೇಹಗಳು ಪತ್ತೆಯಾಗಿವೆ. ಗುಂಡಿನ ದಾಳಿ ವೇಳೆಯಲ್ಲಿ ಇಬ್ಬರು ಜಿಲ್ಲಾ ಮೀಸಲು ಭದ್ರತಾ ಸಿಬ್ಬಂದಿಯೂ ಮೃತಪಟ್ಟಿದ್ದಾರೆ ಎಂದು ಅವರು  ತಿಳಿಸಿದ್ದಾರೆ. ಎನ್ ಕೌಂಟರ್   ಪ್ರಗತಿಯಲ್ಲಿದ್ದು,  ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ. ಹೆಚ್ಚಿನ ತುಕಡಿಗಳನ್ನು ರವಾನಿಸಲಾಗಿದೆ ಎಂದು  ಎಸ್ ಪಿ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment