ಸಿನಿ ಸಮಾಚಾರ

ಸುದೀಪ್ ಮತ್ತು ಸುಹಾಸಿನಿ ಜೊತೆ ನಟಿಸುತ್ತಿರುವುದು ಅದೃಷ್ಟದ ಸಂಗತಿ ಶೃತಿ ಹರಿಹರನ್

ಬೆಂಗಳೂರು: ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ  ಸುದೀಪ್ ಜೊತೆ ಶೃತಿ ಹರಿಹರನ್ ನಟಿಸುತ್ತಿದ್ದಾರೆ. ಅಂಬರೀಷ್ ಗೆ ನಾಯಕಿಯಾಗಿ ಸುಹಾಸಿನಿ ಅಭಿನಿಸುತ್ತಿದ್ದಾರೆ.ಇದೇ ಮೊದಲ ಬಾರಿಗೆ ಶೃತಿ ಹರಿಹರನ್ ಕಿಚ್ಚ ಸುದೀಪ್ ಜೊತೆಗೆ ನಟಿಸುತ್ತಿದ್ದಾರೆ. ಸುಹಾಸಿನಿಯ ಸಣ್ಣ ವಯಸ್ಸಿನ ಪಾತ್ರದಲ್ಲಿ ಶೃತಿ ಅಭಿನಯಿಸುತ್ತಿದ್ದಾರೆ.
ಗುರುದತ್ತ ಗಾಣಿಗ ನಿರ್ದೇಶನದ ಸಿನಿಮಾದಲ್ಲಿ ಅಂಬರೀಷ್ ಅವರ ಯಂಗರ್ ವರ್ಸನ್ ನಲ್ಲಿ ಸುದೀಪ್ ಸುಹಾಸಿನಿ ಯಂಗರ್ ವರ್ಸನ್ ನಲ್ಲಿ ಶೃತಿ ಹರಿಹರನ್ ನಟಿಸುತ್ತಿದ್ದಾರೆ.ಗುರು ಬಗ್ಗೆ ನನಗೆ ಗೊತ್ತಿದೆ ಅವರು ಈ ಮೊದಲು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಈ ಸಿನಿಮಾದಲ್ಲಿ ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಹೇಳಿದ್ದಾರೆ.

 

 

About the author

ಕನ್ನಡ ಟುಡೆ

Leave a Comment