ಸಿನಿ ಸಮಾಚಾರ

ಸುದೀಪ ಮತ್ತು ದರ್ಶನ್ ನಡುವೆ ಜಗಳ ಯಾಕೆ!!?

ಬೆಂಗಳೂರು: ತಮ್ಮ ವೃತ್ತಿ ಬದುಕಿನ ಬಗ್ಗೆ ಖಾಸಗಿ ಸುದ್ದಿ ವಾಹಿನಿಯೊಂದರ ಸಂದರ್ಶನದ ವೇಳೆ  ನಟ ಸುದೀಪ್‌ ನೀಡಿದ್ದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ನಟ ದರ್ಶನ್‌ ‘ನಾವಿಬ್ಬರು ಸ್ನೇಹಿತರಲ್ಲ’ ಎಂದು ಟ್ವೀಟ್‌ ಮಾಡಿದ್ದು ಭಾರಿ ಸುದ್ದಿಯಾಗಿದೆ.

‘ನಾನು ಹಾಗೂ ಸುದೀಪ್‌ ಸ್ನೇಹಿತರಲ್ಲ. ಕನ್ನಡಚಿತ್ರರಂಗಕ್ಕೆ ಕೆಲಸ ಮಾಡುತ್ತಿರುವ ಕಲಾವಿದರು ಅಷ್ಟೇ. ಇದನ್ನೆಲ್ಲ ಸುದ್ದಿ ಮಾಡದೆ ಇಲ್ಲಿಗೆ ಮುಗಿಸಿ’ ಎಂದು ಟ್ವೀಟ್‌ ಮಾಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಈ ಹಿಂದೆ ನಟ ಕಿಚ್ಚ ಸುದೀಪ್‌ ಖಾಸಗಿ ಸುದ್ದಿ ವಾಹಿನಿಯೊಂದರ ಸಂದರ್ಶನದ ವೇಳೆ, ‘ನಾನು ದರ್ಶನ್‌ ಅನ್ನು ಮೊದಲು ನೋಡಿದಾಗ ಆತ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸಿನಿಮಾದ ಕ್ಲಾಪ್‌ ಬೋರ್ಡ್‌ ಹಿಡಿದು ನಿಂತಿದ್ದ.  ದರ್ಶನ್‌ಗೆ ಬಹಳ ಸಂಖ್ಯೆಯ ಮಾಸ್‌ ಅಭಿಮಾನಿಗಳನ್ನು ನೀಡಿದ ‘ಮೆಜೆಸ್ಟಿಕ್‌’ ಸಿನಿಮಾ ಮಾಡುವ ಅವಕಾಶ ಮೊದಲಿಗೆ ನನಗೆ ಬಂದಿತ್ತು. ಆದರೆ ನಾನು ನಿರಾಕರಿಸಿದ್ದ ಕಾರಣ ದರ್ಶನ್‌ ಅದರಲ್ಲಿ ನಟಿಸಿದ್ದರು’ ಎಂದು ಹೇಳಿಕೊಂಡಿದ್ದರು.
ಅಸಮಾಧಾನಗೊಂಡಿರುವ ದರ್ಶನ್‌, ‘ಇದರಿಂದ ನನಗೆ ನೋವಾಗಿದ್ದು, ಈ ವಿಚಾರವಾಗಿ ಸುದೀಪ್‌ ಸ್ಪಷ್ಟೀಕರಣ ನೀಡಬೇಕು’ ಎಂದು ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment