ರಾಜಕೀಯ

ಸುದ್ದಿಗೋಷ್ಠಿ ಮುಂದೂಡಿಕೆ: ಚುನಾವಣೆ ಆಯೋಗ ಪ್ರಧಾನಿ ಮೋದಿ ಕೈಗೊಂಬೆ ಎಂದು ಕಾಂಗ್ರೆಸ್ ಟೀಕೆ

ಕೋಲ್ಕೊತಾ: ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಮಾಡಲು ಆಯೋಗ ಕರೆದಿದ್ದ ಸುದ್ದಿಗೋಷ್ಠಿ ಮುಂದೂಡಿದ್ದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. ನವದೆಹಲಿಯ ಚುನಾವಣಾ ಆಯೋಗ ಕಚೇರಿಯಲ್ಲಿ ಮದ್ಯಾಹ್ನ 12.30 ಕ್ಕೆ ಸುದ್ದಿಗೋಷ್ಠಿ ಮಾಡಲು ನಿರ್ಧರಿಸಿತ್ತು. ಐದು ರಾಜ್ಯಗಳಾದ ಮಧ್ಯಪ್ರದೇಶ, ಛತ್ತಿಸ್​ಘಡ, ರಾಜಸ್ಥಾನ್, ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆ ಮತ್ತು ಕರ್ನಾಟಕದ ರಾಮನಗರ ಹಾಗೂ ಜಮಖಂಡಿ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕವನ್ನು ನಿಗದಿ ಮಾಡಿ, ಘೋಷಣೆ ಮಾಡಲು ನಿರ್ಧರಿಸಿತ್ತು, ಆದರೆ 12.30ಕ್ಕೆ ಇದ್ದ ಸುದ್ದಿಗೋಷ್ಠಿಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದೆ. ರಾಜಸ್ಥಾನದಲ್ಲಿ ಪ್ರಧಾನಿ ಮೋದಿ ರ್ಯಾಲಿ ಇರುವ ಕಾರಣಕ್ಕೆ ಮುಂದೂಡಿದೆ. ಚುನಾವಣಾ ಆಯೋಗ ಪ್ರಧಾನಿ ನಿಯಂತ್ರಣದಲ್ಲಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಆರೋಪ ಮಾಡಿದ್ದಾರೆ.
ರಾಜಸ್ಥಾನದಲ್ಲಿ ಮಧ್ಯಾಹ್ನ 1 ಗಂಟೆಗೆ ಮೋದಿ ಅವರ ರ್ಯಾಲಿ ಇದ್ದು, ಒಂದು ವೇಳೆ ಚುನಾವಣೆ ದಿನಾಂಕ ಘೋಷಣೆಯಾದರೆ, ನೀತಿ ಸಂಹಿತೆ ಜಾರಿಯಾಗುತ್ತದೆ. ಆಗ ಮೋದಿ ಅವರ ರ್ಯಾಲಿ ರದ್ದಾಗುತ್ತದೆ. ಇದೇ ಕಾರಣದಿಂದ ಸುದ್ದಿಗೋಷ್ಠಿಯನ್ನು ಮುಂದೂಡಲಾಗಿದೆ ಎಂದು ಸುರ್ಜೆವಾಲಾ ಆರೋಪ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment