ಅಂಕಣಗಳು

ಸುದ್ದಿ‌ ಮಾಧ್ಯಮದೆಡೆಗೆ ಯುವ ಸಮೂಹ!

Written by Admin

“ನಾನು ಕನ್ನಡ ಚೆನ್ನಾಗಿ ಓದುತ್ತೀನಿ ಹಾಗು ಬರೆಯುತ್ತೀನಿ ಆದರೂ ಮಾಧ್ಯಮದಲ್ಲಿ ಕೆಲಸ ಸಿಕ್ತಿಲ್ಲ ಹೀಗನ್ನೊ ಮಂದಿಗೆ ಇಲ್ಲೊಂದು ಮಾಹಿತಿ”ಮಾಧ್ಯಮ ಸಂವಿಧಾನದ ನಾಲ್ಕನೇ ಅಂಗ .. ಜಗತ್ತಿನ ಹಾಗು ಹೋಗುಗಳ ಬಗ್ಗೆ ಸುದ್ದಿಯನ್ನು ಬಿತ್ತರಿಸೋ ಒಂದು ಸಂವಹನ.ಆದರೆ ಮಾಧ್ಯಮವೇ ಎಲ್ಲರ ಉಸಿರು ಅದರಿಂದಲೇ ಜಗತ್ತು ನಿಂತಿದೆ ಅಂತ ಇತ್ತೀಚಿನ ದಿನಗಳಲ್ಲಿ ಬಿಂಬಿತವಾಗ್ತಿದೆ ಖಂಡಿತವಾಗಿಯೂ ಇಲ್ಲ..ಮಾಧ್ಯಮ ಸುದ್ದಿ ಬಿತ್ತರಿಸೋಕೆ ವೇದಿಕೆ ವಿನಗ ಅದೆ ಎಲ್ಲವೂ ಅಲ್ಲ ..ಇಂದಿನ ಯುವ ಜನರ ತಲೆಯಲ್ಲಿ ಹಾಸುಹೊಕ್ಕಾಗಿ ನಾನು ಮಾಧ್ಯಮಕ್ಕೆ ಹೋಗಬೇಕು ಏನಾದರೂ ಮಾಡಬೇಕು ಬಾಯಿ ಬಿಟ್ಟರೆ ಇದೇ ಮಾತು " ಸರ್/ಮೇಡಂ ನನಗೆ ರಿಪೋರ್ಟರ್ ಆಗಬೇಕು ಪ್ಲೀಸ್ ಹೆಲ್ಪ್ ಮಾಡಿ ನಾನು ಆ್ಯಂಕರ್ ಆಗಬೇಕು ಪ್ಲೀಸ್ ಹೆಲ್ಪ್ ಮಾಡಿ ಅನ್ನೋ ಮಂದಿಗೆ ಮಾಧ್ಯಮ ಅನ್ನೋ ಒಂದು ಜಗತ್ತು ಹೇಗಿರುತ್ತೆ ಅಂತಲೇ ತಿಳಿದಿರೋಲ್ಲ.

ಹೌದು ಮಾಧ್ಯಮ ನಾವು ಅಂದಕೊಂಡಂತೆ ಅಲ್ಲ ಅದು ವಿದ್ಯುನ್ಮಾನ ಅಥವಾ ಪತ್ರಿಕೆ ಯಾವುದಾದರೂ ಸರಿ ಎಲ್ಲವೂ ಅದರ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸುತ್ತೆ . ಯುವಜನಕ್ಕೆ ಅದರ ಅರಿವೇ ಇರೋದಿಲ್ಲ ನಾನು ಟಿವಿ ಲಿ ಕಾಣಿಸಕೊಳ್ಳಬೇಕು ನಾನು ಒಬ್ಬ ಪತ್ರಕರ್ತನಾಗಬೇಕು ಅಂತ ಸಾಕಷ್ಟಿದ್ದಾರೆ ಬಟ್ ಮಾಧ್ಯಮದ ಆಳ ಅಗಲ ವಿಸ್ತಾರ ನೀವು ಅಂದುಕೊಂಡಂತೆ ಅಲ್ಲ ಅದರಿಂದಲೇ ನಾನು ದೊಡ್ಡ ವ್ಯಕ್ತಿ ಆಗೋದು ಅದೊಂದೆ ಎಲ್ಲವೂ ಅಲ್ಲ ಅದನ್ನ ಬಿಟ್ಟು ಇನ್ನೂ ಬೇರೆ ಇದೆ ಅದರ ಕಡೆ ಗಮನ ಹರಿಸಿ .ಇವತ್ತಿನ ದಿನ ಎಷ್ಟೋ ಜನ ನಾ ಏನಾದರೂ ಸಾಧನೆ ಮಾಡಬೇಕು ಅಂದಾಗ ಎದುರಾಗೋದು ಈ ವಿಶ್ಯೂಲ್ ಮಿಡಿಯಾ ಬಟ್ ಅದರ ಕಾರ್ಯ ವೈಖರಿ ನಿನಗೆ ಗೊತ್ತೆ .

ಮೈತುಂಬಾ ಕಣ್ಣಿದ್ದರೂ ಸಾಲದು ಒಂದು ಸಣ್ಣ ಹೆಜ್ಜೆ ನಮ್ಮ ಇಡೀ ಜೀವನದ ಅಡಿಪಾಯವನ್ನೆ ಬೇರು ಸಮೇತ ಕಿತ್ತೆಸಗುತ್ತೆ..ಸ್ನೇಹಿತ್ರೆ ಮಾಧ್ಯಮ ಒಂದು ಅಂಗ ಅಷ್ಟೆ ಇವತ್ತಿನ ದಿನ ಸಾಧಿಸೋ ಹಂಬಲದಲಿ ಎಷ್ಟು ಜನ ಕೈಸುಟ್ಟು ಮನೆಗೆ ತೆರಳಿದ್ದಾರೆ ಗೊತ್ತೆ ..ಅದರ ಆಳ ಅಗಲ ತಿಳಿದು ಹೋಗೋದು ಉತ್ತಮ.

ಒಬ್ಬ ಪತ್ರಕರ್ತನ ಜವಾಬ್ದಾರಿ ಸಾಕಷ್ಟಿರುತ್ತೆ ಯುವಜನ ಲೋಗೋ ಸಿಕ್ರೆ ಸಾಕು ನಾ ಯಾರಬಳಿ ಬೇಕಾದರು ಮಾತಾಡಬಹುದು ಅಂತಾರೆ ಆದ್ರೆ ಲೋಗೋ ಅನ್ನೊ ಪದ ಇಡೀ ಚಾನೆಲ್ ನ ಜವಾಬ್ದಾರಿ ಹೊಂದಿರುತ್ತೆ ಅನ್ನೋದು ನೆನಪಿರಲಿ ನಿಮ್ಮ ಒಂದು ತಪ್ಪು ಚಾನೆಲ್ ನ್ನೆ ನೆಲಸಮ ಮಾಡಲೂ ಬಹುದು ಅಥವಾ ಉತ್ತಂಗಕ್ಕೆ ಏರಿಸಲೂ ಬಹುದು ಎಲ್ಲವೂ ನಿಮ್ಮ ಚಾಣಾಕ್ಷತನಕ್ಕೆ ಬಿಟ್ಟದ್ದು . ಪ್ರತಿಭೆ ಗುರತಿಸ್ತಿಲ್ಲ ಎಲ್ಲಾ ರಾಜಕೀಯ ಅನಿಸೋದು ಸಹಜ ಆದ್ರೆ ತಾಳ್ಮೆ ಅನ್ನೋ ಪದ ನಿಮ್ಮನ್ನು ಮತ್ತಷ್ಟು ಹಿಮ್ಮಡಿಗೊಳಿಸುತ್ತೆ ಅನ್ನೋದು ನೆನಪಿರಲಿ ಬಿಕಾಸ್ ಜೀವನ ನಾವಂದುಕೊಂಡಂತೆ  ಸಾಗಿ ಬಿಟ್ರೆ ಅದಕ್ಕೆಲ್ಲಿ ಸಾರ್ಥಕತೆ ಹೇಳಿ. ಯಾವುದೇ ವಿಚಾರಕ್ಕೂ ಕೈ ಹಾಕೋ ಮುನ್ನ ಅದರ ಒಂದು ಕೋರ್ಸ್ ಮಾಡಿ ಅದರ ಬಗ್ಗೆ ವಿಷಯ ತಿಳಿಯರಿ ನಾ ಅದನ್ನ ಮಾಡಬಲ್ಲೆ ಅನ್ನೋ ಆತ್ಮವಿಶ್ವಾಸ ಹೊಂದಿದ್ದಲ್ಲಿ ಖಂಡಿತ ಎಲ್ಲವೂ ಸಾಧ್ಯ.ಏನೂ ತಿಳಿಯದೆ ಹೋದರೆ ಖಂಡಿತ ಅದು ಕ್ಷಣಿಕ ಇಂದಿನ ಯುವ ಪೀಳಿಗೆಗೆ ಇದು ಅನ್ವಯ ಅಂದ್ರು ತಪ್ಪಲ್ಲ ಏನೂ ತಿಳಿಯದೆ ಹೋದ್ರು ನಾ ಮಾಡ್ತೀನಿ ಅಂತ ಬಿಸಿರಕ್ತದಲ್ಲಿ ಬರೋ ಮಂದಿಗೆ ಕೆಲವೊಂದಷ್ಟು ಪೆಟ್ಟು ಬಿದ್ದಿರೋದು ನಾ ಕಣ್ಣಾರೆ ಕಂಡಿದ್ದೀನಿ ಇವತ್ತೇನೊ ಯಾರು ಬೇಕಾದ್ರು ಆ್ಯಂಕರ್ ಆಗಬಹುದು ಯಾರು ಬೇಕಾದ್ರು ಪತ್ರಕರ್ತರಾಗಬಹುದು ಆದರೆ ಹೆಸರು ಮಾಡೋದು ಕಷ್ಟವೇ ಸರಿ.

 

ಪಲ್ಲವಿ ಗೌಡ

 

About the author

Admin

Leave a Comment