ಕ್ರೀಡೆ

ಸುನೀಲ್ ಗವಾಸ್ಕರ್ ನಾಗಿನ್ ಡ್ಯಾನ್ಸ್ ನೋಡಿ ಬಾಂಗ್ಲಾ ಅಭಿಮಾನಿಗಳು ಉರಿದುಕೊಳ್ಳುತ್ತಿದ್ದಾರೆ.

ಭಾರತ:ನಿಡಾಹಸ್ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ದಿನೇಶ್ ಕಾರ್ತಿಕ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ ವಿರೋಚಿತ ಗೆಲುವು ಸಾಧಿಸಿದೆ. ಈ ಪಂದ್ಯದ ನಡುವೆ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ನಾಗಿನ್ ಡ್ಯಾನ್ಸ್ ಮಾಡಿದ್ದು ಇದಕ್ಕೆ ಬಾಂಗ್ಲಾದೇಶದ ಅಭಿಮಾನಿಗಳು ಉರಿದುಕೊಂಡು ಟ್ವೀಟ್ ಮಾಡಿದ್ದಾರೆ.

ಹೌದು ಪಂದ್ಯದ ವಿಮರ್ಶೆಗಾರರಾಗಿದ್ದ ಸುನೀಲ್ ಗವಾಸ್ಕರ್ ಅವರು ಪಂದ್ಯದ ನಡುವೆ ನಾಗಿನ್ ಡ್ಯಾನ್ಸ್ ಮಾಡಿದ್ದರು. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೇಟ್ ಲೀ ಮತ್ತು ಆಮೀರ್ ಸೋಹಿಲ್ ಗವಾಸ್ಕರ್ ನಾಗಿನ್ ಡ್ಯಾನ್ಸ್ ನೋಡಿ ಸಂತೋಷ ಪಟ್ಟಿದ್ದರು. ಆದರೆ ಫೈನಲ್ ನಲ್ಲಿ ಪಂದ್ಯ ಸೋತ್ತಿದ್ದರಿಂದ ಆಕ್ರೋಶಗೊಂಡಿರುವ ಬಾಂಗ್ಲಾ ಅಭಿಮಾನಿಗಳು ಗವಾಸ್ಕರ್ ವಿರುದ್ಧ ಟ್ವೀಟ್ ಮಾಡುವ ಮೂಲಕ ತಮ್ಮ ಸಿಟ್ಟನ್ನು ಹೊರ ಹಾಕುತ್ತಿದ್ದಾರೆ.

 

 

About the author

ಕನ್ನಡ ಟುಡೆ

Leave a Comment