ರಾಜ್ಯ ಸುದ್ದಿ

ಸುಮಲತಾ ಅಂಬರೀಷ್ ಗೆ ಹೆಚ್ಚಿನ ಭದ್ರತೆ ನೀಡುವಂತೆ ಡಿಜಿ, ಐಜಿಪಿಗೆ ಚುನಾವಣಾ ಆಯೋಗ ಸೂಚನೆ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆ  ಹೆಚ್ಚಿನ ಭದ್ರತೆ ಒದಗಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಚುನಾವಣಾ ಆಯೋಗ ಪತ್ರ ಬರೆದಿದೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಎದುರಾಳಿ ಸುಮಲತಾ ಅಂಬರೀಷ್ ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಯಾದರೆ ನಾವು ಜವಾಬ್ದಾರಲ್ಲ ಎಂಬರ್ಥದಲ್ಲಿ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.

ಈ ಹೇಳಿಕೆಯಿಂದ ಆತಂಕಗೊಂಡಿದ್ದ ಸುಮಲತಾ ಅಂಬರೀಷ್ ಪರ ಚುನಾವಣಾ ಏಜೆಂಟ್ ಮದನ್ ಕುಮಾರ್, ಸುಮಲತಾ ಅಂಬರೀಷ್ ಅವರಿಗೆ  ಭದ್ರತೆ ಹೆಚ್ಚಿಸುವಂತೆ ಚುನಾವಣಾ ಆಯೋಗಕ್ಕೆ ಇ- ಮೇಲ್  ಮೂಲಕ ದೂರು ಸಲ್ಲಿಸಿದ್ದರು. ಈ ದೂರಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜ್ಯ ಚುನಾವಣಾ ಆಯೋಗ, ಸುಮಲತಾ ಅಂಬರೀಷ್ ಅವರಿಗೆ ಭದ್ರತೆ ವಿಚಾರದಲ್ಲಿ ಪರಿಶೀಲಿಸುವಂತೆ  ಹಾಗೂ 24 ಗಂಟೆಯೊಳಗೆ ಈ ಸಂಬಂಧ ವರದಿ ಸಲ್ಲಿಸುವಂತೆ ಸೂಚಿಸಿದೆ.

About the author

ಕನ್ನಡ ಟುಡೆ

Leave a Comment