ಸಿನಿ ಸಮಾಚಾರ

ಸುಮಲತಾ ಬಗ್ಗೆ ನನಗೆ ತುಂಬಾ ಗೌರವ ಇದೆ: ನಟ ಉಪೇಂದ್ರ

ಕೊಪ್ಪಳ: ತೀವ್ರ ಜಿದ್ದಾಜಿದ್ದಿನ ಹಣಾಹಣಿ ಏರ್ಪಟ್ಟಿರುವ  ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಬಗ್ಗೆ ತುಂಬಾ ಗೌರವ ಇರುವುದಾಗಿ ರಿಯಲ್ ಸ್ಟಾರ್ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು,ಸುಮಲತಾ ಬಗ್ಗೆ ನನಗೆ ತುಂಬಾ ಗೌರವ ಇದೆ, ಸುಮಲತಾ ನಮ್ಮ ಅತ್ತಿಗೆ ಇದ್ದಂಗೆ ಎಂದಿದ್ದಾರೆ. ರೇಬಲ್ ಸ್ಟಾರ್ ಅಂಬರೀಷ್  ನನ್ನ ಅಣ್ಣ, ಸುಮಲತಾ ಅಂಬರಿಶ್  ಅತ್ತಿಗೆ ಇದ್ದ ಹಾಗೆ ಅವರ ಮೇಲೆ ಅಪಾರ ಗೌರವವನ್ನು ಹೊಂದಿದ್ದೇನೆ ಎಂದು ತಿಳಿಸಿದ್ದಾರೆ.ಸುಮಲತಾ ಅಂಬರೀಷ್ ಅವರಿಗೆ ಚುನಾವಣೆಯಲ್ಲಿ ಒಳ್ಳೆದಾಗುತ್ತೆ , ಉತ್ತಮ ಭವಿಷ್ಯ ಇರುವುದಾಗಿ ಹೇಳಿದರು.

ಇನ್ನೂ ಉತ್ತಮ ಪ್ರಜಾಕೀಯ ಪಕ್ಷದ ಪರ ನಾನು ನಟನಾಗಿ ಮತ ಕೇಳ್ತಾ ಇಲ್ಲ, ನಟನಾಗಿ ಓಟು ಕೇಳಿದರೆ ನಿವೇಲ್ಲಾ ನಗುತ್ತೀರಾ ಇದರಿಂದ ಒಳ್ಳೆಯ ವಿಚಾರಗಳಿಗೆ ಮತ ಹಾಕಿ ಎಂದು ಕೇಳ್ತಾ ಇದೀನಿ ಎಂದು ತಿಳಿಸಿದರು. ಇನ್ನು ಇದೇ ಸಂದರ್ಭದಲ್ಲಿ ಸುಂದರವಾದ ಕಲ್ಪನೆ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇನೆ. ದಯವಿಟ್ಟು ಉತ್ತಮ ಪ್ರಜಾಕೀಯ ಪಕ್ಷ ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

About the author

ಕನ್ನಡ ಟುಡೆ

Leave a Comment