ರಾಜ್ಯ ಸುದ್ದಿ

ಸುಳವಾಡಿ ವಿಷ ಪ್ರಸಾದ ದುರಂತ: ಮೃತರ ಸಂಖ್ಯೆ 17ಕ್ಕೇರಿಕೆ

ಮೈಸೂರು: ಪ್ರಸಾದ ಸೇವನೆಯಿಂದ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಮತ್ತೊಬ್ಬರು ಅಸುನೀಗಿದ್ದಾರೆ. ಕಳೆದ 9 ದಿನಗಳಿಂದ ಮೈಸೂರಿನ ಸುಯೋಗ್ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಂಗನ್ (45) ಶನಿವಾರ ಮೃತಪಟ್ಟಿದ್ದಾರೆ. ಈ  ಮೂಲಕ ಸುಳವಾಡಿ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 17ಕ್ಕೇರಿದೆ.

ಸುಳವಾಡಿ ದೇವಾಲಯದಲ್ಲಿನ ಆದಾಯದ ಮೂಲದಿಂದಲೇ ಪ್ರಸಾದದಲ್ಲಿ ವಿಷ ಪ್ರಾಶನದಂತಹ ದುಷ್ಕೃತ್ಯ ನಡೆಯಿತು ಎಂಬುದು ಇದೀಗ ತನಿಖೆಯಿಂದ ದೃಢಪಟ್ಟು, ಆರೋಪಿಗಳು ಸಹ ಬಂಧಿತರಾಗಿದ್ದಾರೆ.

ಸುಳವಾಡಿ ಸೇರಿದಂತೆ ಜಿಲ್ಲೆಯ ಇನ್ನು ಕೆಲ ಖಾಸಗಿ ದೇವಾಲಯಗಳ ಒಡೆತನಕ್ಕೆ ಸಂಬಂಧಿಸಿದಂತೆ ಗುಂಪುಗಾರಿಕೆ, ಸಂಘರ್ಷ ನಡೆದಿರುವುದು, ನಡೆಯುತ್ತಿರುವುದು ತಿಳಿಯದ ಸಂಗತಿಯಲ್ಲ. ಕೆಲವುಗಳ ವ್ಯಾಜ್ಯ ನ್ಯಾಯಾಲಯದಲ್ಲೂ ಇದೆ.

About the author

ಕನ್ನಡ ಟುಡೆ

Leave a Comment