ದೇಶ ವಿದೇಶ

ಸುಳ್ಳು ಮಾಹಿತಿ ಪ್ರಕಟಿಸಿದರೆ 10 ವರ್ಷ ಜೈಲು ಶಿಕ್ಷೆ ಮಲೇಷ್ಯಾ

ಮಲೇಷ್ಯಾ: ಮಲೇಷ್ಯಾ ಸರ್ಕಾರ ಸುಳ್ಳು ಮಾಹಿತಿಯನ್ನು  ಪ್ರಕಟಿಸುವವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಮಹತ್ವದ ಮಸೂದೆಯನ್ನು ಸಂಸತ್ತಿನಲ್ಲಿ ಸೋಮವಾರ ಮಂಡಿಸಿದೆ. ‘ಸುಳ್ಳು ಸುದ್ದಿ’ಗೆ ಕಡಿವಾಣ ಹಾಕಲು ಮುಂದಾಗಿರುವ ಮಲೇಷ್ಯಾ ಸರ್ಕಾರ ಈ ಸಂಬಂಧ ಹೊಸ ಕಾನೂನು ಜಾರಿಗೊಳಿಸಲು ಮುಂದಾಗಿದೆ.

ಇದಕ್ಕೆ ಪೂರ್ವಭಾವಿಯಾಗಿ ಮಸೂದೆಯನ್ನು ಸಂಸತ್ತಿನಲ್ಲಿ ಸೋಮವಾರ ಮಂಡಿಸಲಾಗಿದೆ. ಅದರಂತೆ ಸುಳ್ಳು ಸುದ್ದಿ ಪ್ರಕಟಿಸುವವರಿಗೆ ಮತ್ತು ಅದಕ್ಕೆ ಪ್ರಚೋದನೆ ನೀಡುವವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾದ ಕಾನೂನು ಜಾರಿಗೆ ಮಲೇಷ್ಯಾ ಸರ್ಕಾರ ಮುಂದಾಗಿದೆ ಈ ಸಂಬಂಧ ನಿನ್ನೆ ಮಸೂದೆಯೊಂದನ್ನು ಮಂಡಿಸಿದೆ. ಈ ಮಸೂದೆ ಕಾನೂನಾಗಿ ಜಾರಿಯಾಗಿದ್ದೇ ಆದರೆ ಸುಳ್ಳು ಸುದ್ದಿ ಪ್ರಕಟಿಸಿದ್ದು ಕಾನೂನು ಪ್ರಕಾರ ಸಾಬೀತಾದರೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಹಾಗೂ 5ಲಕ್ಷ ದಂಡ ವಿಧಿಸಬಹುದೆಂದು ತಿಳಿದುಬಂದಿದೆ.

 

 

 

About the author

ಕನ್ನಡ ಟುಡೆ

Leave a Comment