ರಾಷ್ಟ್ರ

ಸೂಪರ್ ಸ್ಟಾರ್ ರಜಿನಿ ಹೃಷಿಕೇಶದಲ್ಲಿ ಸಾಧು ಸಂತರಿಗೆ ಭೋಜನ ವ್ಯವಸ್ಥೆ ಮಾಡಿದರು.

ನವದೆಹಲಿ: ತಮಿಳು ನಟ ಸೂಪರ್ ಸ್ಟಾರ್ ರಜನೀಕಾಂತ್ ಹೃಷಿಕೇಶದ ಸ್ವಾಮಿ ದಯಾನಂದ ಸ್ವಾಮಿ ಆಶ್ರಮಕ್ಕೆ ತೆರಳಿ ಸಂತರನ್ನು ಭೇಟಿಯಾಗಿದ್ದಾರೆ.ಪ್ರತಿ ವರ್ಷ ಅಧಾತ್ಮ ಪ್ರವಾಸ ಕೈಗೊಳ್ಳುವ ತಮಿಳು ನಟ ಸೂಪರ್ ಸ್ಟಾರ್ ರಜನಿಕಾಂತ್ ಈ ವರ್ಷವೂ ಉತ್ತರ ಭಾರತದ ಕೆಲವೆಡೆ ಪ್ರವಾಸ ಆರಂಭಿಸಿದ್ದಾರೆ  ಉತ್ತರಾಖಂಡದ ಆಶ್ರಮಕ್ಕೆ ತೆರಳಿದ್ದರು.

ಉತ್ತರಾಖಂಡದ ಸ್ವಾಮಿ ದಯಾನಂದ ಆಶ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿದ ರಜನಿಕಾಂತ್ ಅವರಿಗಾಗಿ ಹೊರಗೆ ಕಾದು ನಿಂತಿದ್ದರು.ಅವರು ಅಧ್ಯಾತ್ಮ ಪ್ರವಾಸದಲ್ಲಿದ್ದು ಈ ಸಂದರ್ಭದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ರಜನೀಕಾಂತ್ ರಾಜಕೀಯ ಪ್ರವೇಶಿಸಲಿದ್ದು, ಹೊಸ ಪಕ್ಷ ಕಟ್ಟುವ ಘೋಷಣೆ ಮಾಡುವುದಾಗಿ ಹೇಳಿದ್ದರು, ಸಕ್ರಿಯ ರಾಜಕಾರಣದಲ್ಲಿದ್ದುಕೊಂಡು ತಮಿಳುನಾಡಿನ 234 ವಿಧಾನಾಸಭೆ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದ್ದರು, ಆದರೆ ಇದುವರೆಗೂ ರಜನೀಕಾಂತ್ ತಮ್ಮ ಪಕ್ಷದ ಹೆಸರನ್ನು ಘೋಷಿಸಿಲ್ಲ.

 

About the author

ಕನ್ನಡ ಟುಡೆ

Leave a Comment