ತಂತ್ರಜ್ಞಾನ

ಸೂರ್ಯ ಯಾನಕ್ಕೆ ನಾಸಾ ಸಿದ್ಧತೆ

ಚಂದ್ರನಲ್ಲಿಗೆ ಹೋಗಿ ಚಂದ್ರಲೋಕದ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದು ಮುಗಿಯಿತು. ಮಂಗಳನಲ್ಲಿಗೆ ನಾನಾ ರೀತಿಯ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸಿ ಮಾಹಿತಿ ಪಡೆದದ್ದೂ ಆಯಿತು. ಇನ್ನೂ ಮಂಗಳನಿಂದ ನಿತ್ಯವೂ ಹೊಸ ಹೊಸ ಮಾಹಿತಿಗಳೂಬರುತ್ತಲೇ ಇವೆ.

ಇಂತಹ ಸನ್ನಿವೇಶದಲ್ಲಿ ಸೂರ್ಯನ ಇತಿಹಾಸವನ್ನು ತಿಳಿಯಲು ನಮ್ಮ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಮತ್ತೊಂದು ದುಸ್ಸಾಹಸಕ್ಕೆ ಕೈ ಹಾಕಿದೆ. ಎಂದರೆ ಅತಿ ಶಯೋಕ್ತಿಯಲ್ಲವೇ? ಧಗಧಗಿಸುತ್ತಿರುವ ಸೂರ್ಯನ ಮೇಲೆ ತಾಪ ಸುಮಾರು 4500 ದಿಂದ 6500 ಕೆಲ್ವಿನ್ ಇದ್ದು, ಸೂರ್ಯನ ಹತ್ತಿರಕ್ಕೆ ಹೋಗುವ ಎಲ್ಲಾ ರೀತಿಯ ನೌಕೆಗಳೂ ಸುಟ್ಟು ಭಸ್ಮವಾಗುತ್ತವೆ. ಇದುವರೆಗೂ ಸೂರ್ಯನ ಸಮೀಪ ಯಾವ ನೌಕೆಗಳನ್ನು ಕಳುಹಿಸಲಾಗಿಲ್ಲ.

ಮನುಕುಲದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸೂರ್ಯಯಾನಕ್ಕೆ ಸಜ್ಜಾಗಿರುವ ನಾಸಾ ಇದೆ ವರ್ಷದ ಜುಲೈ ತಿಂಗಳಲ್ಲಿ ಫ್ಲಾರಿಡಾದ ಕೆನಡಿ ಸ್ಪೇಸ್ ಸೆಂಟರ್ ನಿಂದ ಸೂರ್ಯನಲ್ಲಿಗೆ ಹೋಗಲು ಬಾಹ್ಯಾಕಾಶ ನೌಕೆಯನ್ನು ಕಳುಹಿಸಲು ಸಜ್ಜಾಗಿ ನಿಂತಿದೆ.

ಪಾರ್ಕರ್ ಸೋಲಾರ್ ಪ್ರೋಬ್ ನ ನೌಕೆ ಸೂರ್ಯನ ಅಂಗಳಕ್ಕೆ ಹೋಗಲಿದ್ದು, ಈಗಾಗಲೇ ರಾಕೆಟ್ ಮತ್ತು ಉಪಗ್ರಹದ ಉಪಕರಣಗಳನ್ನು ಅಮೇರಿಕಾದ ಏರ್ಫೋರ್ಸ್ ನೆಲೆಯಿಂದ ಫ್ಲಾರಿಡಾಕ್ಕೆ ತರಲಾಗಿದೆ. ಅಲ್ಲಿ ವಿವಿಧ ರೀತಿಯ ಮಾದರಿಗಳ ಪರಿಶೀಲನೆ ಹಾಗೂ ಪರೀಕ್ಷೆ ಮಾಡಲಾಗುತ್ತಿದೆ. ಅಂತಿಮ ಹಂತದ ಉಪಕರಣಗಳ ಜೋಡಣೆ ಕಾರ್ಯನಡೆಯ ಬೇಕಿದೆ ಅಷ್ಟೇ.

ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನ ಅಧ್ಯಯನಕ್ಕೆ ಹೋಗುತ್ತಿರುವ ಮೊಟ್ಟ ಮೊದಲ ಬಾಹ್ಯಾಕಾಶ ನೌಕೆ ಹಾಗೂ ಉಪಗ್ರಹವಾಗಿದೆ. ಸೂರ್ಯನ ಮೇಲೆ ಅಧ್ಯಯನ, ಸೂರ್ಯನಲ್ಲಿನ ವಾತಾವರಣ ಹಾಗೂ ಸೂರ್ಯನ ಅತ್ಯಂತ ಹೊರವಲಯ ಕರೋನಾದ ಅಧ್ಯಯನವನ್ನೂ ಪ್ರೋಬ್ ನಡೆಸಲಿದೆ. ಈವರೆಗೆ ಯಾವುದೇ ರೀತಿಯ ಆಕಾಶಕಾಯಗಳ ಅಧ್ಯಯನಕ್ಕಿಂತ ಅತ್ಯಂತ ಸಮೀಪದಲ್ಲಿ, ಅದರಲ್ಲೂ ಸೂರ್ಯನ ಪ್ರಭಾವಲಯದಲ್ಲಿ ಪ್ರೋಬ್ ಕಾರ್ಯನಿರ್ವಹಿಸುವುದು ಎಂದರೆ ಸಾಮಾನ್ಯ ವಿಷಯವಲ್ಲ.ಸೂರ್ಯನ ಅತಿ ಹೆಚ್ಚಿನ ಉಷ್ಣತೆ ಮತ್ತು ವಿಕಿರಣಗಳನ್ನು ಸಮರ್ಪಕವಾಗಿ ಎದುರಿಸುವ ತಾಕತ್ತು ಪಾರ್ಕರ್ ಸೋಲಾರ್ ಪ್ರೋಬ್ ಗಿದೆ. ಅದನ್ನು ಕಳುಹಿಸುವ ಮುಂಚೆ ಹಲವಾರು ಹಂತಗಳಲ್ಲಿ ನೌಕೆಯನ್ನು ಪರೀಕ್ಷೆಗೆ ಒಳಪಡಿಸಿ, ನಂತರ ಸೂರ್ಯನ ಮೇಲ್ಮ ಉಷ್ಣತೆಯನ್ನು ತಡೆದು ಕೊಳ್ಳುವ  TPS(ಥರ್ಮಲ್ ಪ್ರೊಟೆಕ್ಷನ್ ಸಿಸ್ಟಮ್) ಉಪಕರಣವನ್ನು ಅಲ್ಲಿ ಅಳವಡಿಸುವುದು ಮುಖ್ಯವಾಗಿದೆ.ಈ ಉಪಕರಣವನ್ನು ಅಳವಡಿಸುವುದರಿಂದ ಸೂರ್ಯನ ಉಷ್ಣತೆಯನ್ನು ಅದು ತಡೆದುಕೊಳ್ಳಲಿದೆ. ಈ ಯೋಜನೆಯನ್ನು ಸತತವಾಗಿ ಏಳುವರ್ಷಗಳಿಂದ ಕಾರ್ಯಗತ ಗೊಳಿಸುವ ಸ್ಕೀಮ್ ಹಾಕಿಕೊಳ್ಳಲಾಗಿದೆ. ನಮ್ಮ ಭಾರತವೂ ಇದಕ್ಕೆ ಹೊರತಾಗಿಲ್ಲ ನಮ್ಮೆಲ್ಲರ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸಹಾ ಸೂರ್ಯನ ಅಧ್ಯಯನ ಮಾಡಲು 2019-2020 ಕೈ 400 ಕೆ. ಜಿ.ತೂಕದ ಉಪಗ್ರಹವನ್ನು ಕಳುಹಿಸುವ ಯೋಜನೆಯನ್ನು ಈಗಾಗಲೇ ಹಾಕಿಕೊಂಡಿದೆ.ಆದಿತ್ಯ-1 ಎಂಬ ಯೋಜನೆಯ ಮೂಲಕ ಈ ರೀತಿಯ ಕಾರ್ಯವನ್ನು ಯಶಸ್ವಿಗೊಳಿಸಲು  ಶ್ರಮಿಸುತ್ತಿದೆ. ಈ ಯೋಜನೆಗೆ ಇಸ್ರೋ ಈಗಾಗಲೇ ಕೇಂದ್ರ ಸರ್ಕಾರದ ಒಪ್ಪಿಗೆಯನ್ನೂ  ಪಡೆದಿದೆ.

About the author

ಕನ್ನಡ ಟುಡೆ

Leave a Comment