ರಾಷ್ಟ್ರ ಸುದ್ದಿ

ಸೇನೆಯನ್ನು ಮೋದಿ ಸೇನೆ ಎಂದಿದ್ದ ಯೋಗಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ

ಕೋಲ್ಕತ್ತಾ: ಭಾರತೀಯ ಸೇನೆಯನ್ನು ಮೋದಿ ಅವರ ಸೇನೆ ಎಂದು ಕರೆದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ಸೇನೆ ರಾಷ್ಟ್ರದ ಸಂಪತ್ತು. ಇದು ದೇಶದ ಜನರಿಗೆ ಸೇರಿದ್ದು, ಆದರೆ, ಯೋಗಿ ಆದಿತ್ಯನಾಥ್ ಮೋದಿ ಸೇನೆ ಎಂದು ಕರೆಯುವ ಮೂಲಕ  ಸೇನೆಗೆ ಅಪಮಾನ ಮಾಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ಭಾರತೀಯ ಸೇನೆಯನ್ನು ಮೋದಿ ಸೇನಾ ಎಂದು ಯೋಗಿ ಆದಿತ್ಯನಾಥ್ ಮಾತು ಕೇಳಿ ಶಾಕ್ ಆಯಿತು. ಇಂತಹ ಅಪಾರವಾದ ವ್ಯಕ್ತಿ ವೈಭವೀಕರಣ ಹಾಗೂ  ನಮ್ಮ ಅಚ್ಚುಮೆಚ್ಚಿನ ಭಾರತೀಯ ಸೈನ್ಯವನ್ನು ಅಪಮಾನಿಸಲಾಗಿದೆ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.ನಮ್ಮ ಸೇನೆ ಬಗ್ಗೆ ನಮಗೆ ಹೆಮ್ಮೆ ಇದೆ. ಸೇನೆ ಎಲ್ಲರಿಗೂ ಸೇರಿದ್ದು, ರಾಷ್ಟ್ರದ ಅತ್ಯುನ್ನತ ಸಂಪತ್ತಾಗಿದೆ. ಇದು ಬಿಜೆಪಿ ಕ್ಯಾಸೆಟ್  ಅಲ್ಲ. ದೇಶದ ಜನರು ಯೋಗಿ ಆದಿತ್ಯನಾಥ್ ಹೇಳಿಕೆಯನ್ನು  ತಿರಸ್ಕರಿಸಬೇಕೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment