ರಾಷ್ಟ್ರ ಸುದ್ದಿ

ಸೇನೆ ಮೇಲೆ ನಂಬಿಕೆ ಇದೆ, ನಮ್ಮ ಸೇನೆ ನಮ್ಮ ಹೆಮ್ಮೆ ಆದರೆ ನಿಮ್ಮ ಮೇಲೆ ನಂಬಿಕೆ ಇಲ್ಲ: ರಮ್ಯಾ ವಾಗ್ದಾಳಿ

ನವದೆಹಲಿ: ಭಾರತೀಯ ಸೇನೆ ನಮ್ಮ ಹೆಮ್ಮೆ.. ಸೇನೆ ಮೇಲೆ ನಮಗೆ ನಂಬಿಕೆ ಇದ್ದು, ಮೋದಿ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಮತ್ತೆ ಟ್ರೋಲ್ ಗೆ ಒಳಗಾಗಿದ್ದಾರೆ. ಪುಲ್ವಾಮ ಉಗ್ರದಾಳಿ, ಸರ್ಜಿಕಲ್ ಸ್ಟ್ರೈಕ್ ಮತ್ತು ಐಎಎಫ್ ಪೈಲಟ್ ಅಭಿನಂದನ್ ಪ್ರಕರಣದಲ್ಲಿ ಟ್ವೀಟ್ ಮಾಡಿ ಟ್ರೋಲ್ ಗೆ ತುತ್ತಾಗಿದ್ದ ರಮ್ಯಾ, ಮತ್ತೆ ಸೋಮವಾರ ಮಧ್ಯಾಹ್ನ ಟ್ವೀಟ್ ಮಾಡಿ, ನಮ್ಮ ಸೇನೆಯ ಮೇಲೆ ನಮಗೆ ನಂಬಿಕೆಯಿದೆ. ಆದರೆ ನಿಮ್ಮ ಮೇಲೆ ನಂಬಿಕೆಯಿಲ್ಲ, ಸೇನೆ ಯಾವತ್ತೂ ದಾಖಲೆ ಸಹಿತ ಮಾತನಾಡುತ್ತದೆ. ಆದರೆ ನೀವು ಮಾತ್ರ ದಾಖಲೆಯಿಲ್ಲದೆ ಸದಾ ಸುಳ್ಳು ಹೇಳುತ್ತೀರಿ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ರಮ್ಯಾ ಟೀಕಿಸಿದ್ದಾರೆ. ಉಗ್ರರ ಮೇಲೆ ದಾಳಿ ನಡೆಸಿದ ಭದ್ರತಾ ಪಡೆಯನ್ನೇ ಸಂಶಯಿಸುತ್ತೀರಿ, ನಿಮಗೆ ಅವರ ಮೇಲೆ ನಂಬಿಕೆಯಿಲ್ಲವೇ? ನಮ್ಮ ಸೇನೆಯ ಬಗ್ಗೆ ಹೆಮ್ಮೆಯಿಲ್ಲವೇ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ರಮ್ಯಾ, 2014ರಲ್ಲೂ ಚುನಾವಣೆಗೂ ಮುನ್ನ ನೀವು ಪಾಕಿಸ್ತಾನಕ್ಕೆ ತೆರಳಿ ಅಂದಿನ ಪ್ರಧಾನಿ ನವಾಜ್ ಷರೀಫ್ ರನ್ನು ತಬ್ಬಿಕೊಂಡು ಬಂದಿದ್ದಿರಿ.. ಈಗೇಕೆ ನಿಮ್ಮನ್ನು ನಾವು ನಂಬಬೇಕು. ನೋಟು ನಿಷೇಧದಿಂದ ಭಯೋತ್ಪಾದನೆ ಸ್ಥಗಿತವಾಗುತ್ತದೆ ಎಂದು ಹೇಳಿದ್ದಿರಿ. ಆದರೆ ಸ್ಥಗಿತವಾಗುವುದು ಬಿಡಿ ಕಡಿಮೆಯೂ ಆಗಿಲ್ಲ. ನಾವು ವಾಯುದಾಳಿಯಿಂದ ಉಗ್ರರು ಸತ್ತಿದ್ದಾರೆ ಎಂಬ ನಿಮ್ಮ ಮಾತನ್ನು ನಾವು ನಂಬುವುದಿಲ್ಲ ಎಂದು ಹೇಳಿದ್ದಾರೆ. ಅಂತೆಯೇ  ನಮಗೆ ಸೇನೆ ಮೇಲೆ ನಂಬಿಕೆಯಿದೆ, ಆದರೆ ನಿಮ್ಮ ಮೇಲೆ ನಂಬಿಕೆಯಿಲ್ಲ ಎಂದು ಪ್ರಧಾನಿಯವರನ್ನು ಟೀಕಿಸಿ ಟ್ವೀಟ್ ಮಾಡಿದ್ದರು. ಇದೀಗ ರಮ್ಯಾ ಅವರ ಈ ಟ್ವೀಟ್ ಮತ್ತೆ ಟ್ರೋಲ್ ಆಗುತ್ತಿದ್ದು, ಕೆಲ ಟ್ವೀಟರ್ ಖಾತೆದಾರರು, ‘ಮೋದಿ ಅವರಿಗೆ ಪ್ರಶ್ನೆ ಕೇಳೋ ಮುಂಚೆ ತಾವು ಎನ್ನು ದಬಾಕಿದ್ದೀರಾ ಅಂತ ಕತ್ತೆಗೆ ವಯಸ್ಸಾದಂತೆ ವಯಸ್ಸಾಗಿದೆ ಆದರೆ  ಕೆಲವರಿಗೆ ಬುದ್ದಿ ಮಾತ್ರ ಬಂದಿಲ್ಲಾ ರಾಫೇಲ್ ಕಥೆ ಮುಗೀತು ಸರ್ಜಿಕಲ್ ಸ್ಟ್ರೈಕ್ ಆಯ್ತು.. ಅಭಿನಂದನ್ ಅವರು ಬಂದಾಯ್ತು ಇನ್ನೇನ್ನು ವಿಷಯ ಇಲ್ಲಾ ಅದಕ್ಕೆ ಸುಮ್ಮನೆ  ಬಾಯಿ ಬಡೆದುಕೊಳ್ಳೋದು ಅಷ್ಟೇ ನಿನಗೆ ಉಳಿದಿರೋದು ಎಂದು ಟೀಕಿಸಿ ಟ್ವೀಟ್ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment